ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಳಕೆಯೊಡೆದ ಕಾಳುಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಮೊಳಕೆಯೊಡೆದ ಕಾಳಿನಲ್ಲಿ ಕಬ್ಬಿಣ, ವಿಟಮಿನ್ B6, ವಿಟಮಿನ್ C, ಫೈಬರ್, ತಾಮ್ರ, ರಂಜಕ ಮತ್ತು ಮೆಗ್ನೀಸಿಯಮ್ ಸೇರಿ ಹಲವಾರು ಪೋಷಕಾಂಶಗಳಿವೆ.
ಮೊಳಕೆಯೊಡೆದ ಕಾಳು ಸಾಕಷ್ಟು ಫೈಬರ್ ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.
ಮೊಳಕೆಯೊಡೆದ ಕಾಳು ನಿಮ್ಮ ನಿಧಾನ ಚಯಾಪಚಯವನ್ನು ವೇಗಗಗೊಳಿಸುತ್ತದೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನೀವು ಸಲಾಡ್, ಸೂಪ್ ಮತ್ತು ಪಲ್ಯದ ರೂಪದಲ್ಲಿ ಮೊಳಕೆಯೊಡೆದ ಕಾಳುಗಳನ್ನು ಸೇವಿಸಬಹುದು. ಇದನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನಬಹುದು.
ಮೊಳಕೆಯೊಡೆದ ಕಾಳುಗಳನ್ನು ತಿಂದ ನಂತರ ನಿಮಗೆ ದೀರ್ಘಕಾಲ ಹಸಿವಾಗುವುದಿಲ್ಲ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಮೊಳಕೆಯೊಡೆದ ಕಾಳುಗಳನ್ನು ಯಾವಾಗ ಬೇಕಾದರೂ ಅಂದರೆ ಉಪಹಾರ, ಊಟ ಮತ್ತು ರಾತ್ರಿ ಊಟಕ್ಕಾಗಿ ಸೇವಿಸಬಹುದು.
ನಿಯಮಿತವಾಗಿ ಮೊಳಕೆಯೊಡೆದ ಕಾಳುಗಳನ್ನು ತಿನ್ನುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ & ಮಲಬದ್ಧತೆಗೆ ಪರಿಹಾರ ಸಿಗುತ್ತದೆ.