ಮಲಬದ್ಧತೆ

ಫೈಬರ್‌ನಲ್ಲಿ ಸಮೃದ್ಧವಾಗಿರುವ ಚಿಯಾ ಬೀಜಗಳು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮೂಲಕ ಮಲಬದ್ಧತೆಯನ್ನ ತಡೆಯುತ್ತದೆ.

Puttaraj K Alur
Jun 21,2025

ಕರಗಬಲ್ಲ ಫೈಬರ್

ಚಿಯಾ ಬೀಜಗಳು ಕರಗದ ಮತ್ತು ಕರಗಬಲ್ಲ ಫೈಬರ್ ಎರಡನ್ನೂ ಒಳಗೊಂಡಿದ್ದು, ಕರುಳಿನ ಚಲನೆ ನಿಯಂತ್ರಿಸಲು ಮತ್ತು ಮಲಬದ್ಧತೆ ತಡೆಯಲು ಸಹಾಯ ಮಾಡುತ್ತದೆ.

ಕರುಳಿನ ಚಲನೆ

ಚಿಯಾ ಬೀಜಗಳು ದ್ರವವನ್ನ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಇದು ಮಲವನ್ನ ಮೃದುಗೊಳಿಸಲು ಮತ್ತು ಕರುಳಿನ ಚಲನೆ ಸುಲಭಗೊಳಿಸಲು ಸಹಕಾರಿ.

ಪ್ರೀಬಯಾಟಿಕ್

ಚಿಯಾ ಬೀಜಗಳು ಕರುಳಿನ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಾಯ ಮಾಡುವ ಪ್ರೀಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತವೆ, ಇದು ಜೀರ್ಣಕ್ರಿಯೆಗೆ ಸಹಾಯಕವಾಗಿದೆ.

ಗ್ಯಾಸ್ & ಅಸ್ವಸ್ಥತೆ

ಹೆಚ್ಚಿನ ಫೈಬರ್ ಸೇವನೆಯು ಕೆಲವು ಜನರಿಗೆ ಹೊಟ್ಟೆ ಉಬ್ಬುವುದು, ಗ್ಯಾಸ್ ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು.

ನೀರು ಕುಡಿಯಬೇಕು

ನೀವು ಚಿಯಾ ಬೀಜಗಳನ್ನು ಸೇವಿಸುವಾಗ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಇಲ್ಲದಿದ್ದರೆ ನೀವು ಮಲಬದ್ಧತೆಯನ್ನು ಅನುಭವಿಸಬಹುದು.

ನೀರಿನಲ್ಲಿ ನೆನೆಸಿ

ಚಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವಿಸುವುದು ಅವುಗಳ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಸಲಾಡ್

ನೀವು ಚಿಯಾ ಬೀಜಗಳನ್ನು ನಿಮ್ಮ ಸಲಾಡ್, ಮೊಸರು ಅಥವಾ ಸ್ಮೂಥಿಗಳಲ್ಲಿಯೂ ಸೇರಿಸಬಹುದು.

VIEW ALL

Read Next Story