ರಾತ್ರಿ ಹೊತ್ತು ದಾಳಿಂಬೆ ತಿನ್ನುವುದರ ಆರೋಗ್ಯ ಪ್ರಯೋಜನಗಳಿವು
ತೂಕ ಕಳೆದುಕೊಳ್ಳಲು ಬಯಸುವವರು ದಾಳಿಂಬೆ ಹಣ್ಣನ್ನು ರಾತ್ರಿ ಹೊತ್ತಿನಲ್ಲಿ ಸೇವಿಸಬೇಕು.
ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ದಾಳಿಂಬೆ ಹಣ್ಣುಗಳನ್ನು ತಮ್ಮ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸಬಹುದು.
ಇದಲ್ಲದೆ, ದಾಳಿಂಬೆ ಹಣ್ಣು ಮಲಬದ್ಧತೆ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿದೆ.
ದಾಳಿಂಬೆ ಬೀಜಗಳಿಂದ ತಯಾರಿಸಿದ ಜ್ಯೂಸ್ ಅನ್ನು ರಾತ್ರಿ ಕುಡಿಯುವುದರಿಂದ ರಕ್ತಹೀನತೆ ಮತ್ತು ಅಸ್ವಸ್ಥತೆ ನಿವಾರಿಸಬಹುದು.
ಮೂಳೆ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಲೋಟ ದಾಳಿಂಬೆ ರಸಕ್ಕೆ ಒಂದು ಚಮಚ ಶುಂಠಿ ರಸವನ್ನು ಬೆರೆಸಿ ಬೆಳಗಿನ ಉಪಾಹಾರಕ್ಕೆ ಅರ್ಧ ಗಂಟೆ ಮೊದಲು ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ದಾಳಿಂಬೆ ರಸವು ಕೀಲು ನೋವು ಮತ್ತು ಮಂಡಿ ನೋವನ್ನು ಸಹ ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿದ್ರಾಹೀನತೆಯಿಂದ ಬಳಲುತ್ತಿರುವವರು ದಾಳಿಂಬೆ ಜ್ಯೂಸ್ ರಾತ್ರಿ ವೇಳೆ ಮಲಗುವ ಮುನ್ನ ಕುಡಿಯಬೇಕು.
ಬೆಳಗಿನ ಉಪಹಾರದ ಭಾಗವಾಗಿ ದಾಳಿಂಬೆ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.
ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ಜ್ಯೂಸ್ ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ.