ಬದನೆಕಾಯಿಯಲ್ಲಿರುವ ಫೈಟೊಕೆಮಿಕಲ್‌ಗಳು ರಕ್ತದ ಹರಿವನ್ನು ಸುಧಾರಿಸುತ್ತವೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಫ್ಲೇವನಾಯ್ಡ್‌ಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಮತ್ತು ಹೃದಯದ ಕಾಯಿಲೆಗಳ ಅಪಾಯವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬದನೆಕಾಯಿಯ ಸಿಪ್ಪೆಯಲ್ಲಿರುವ ನಾಸುನಿನ್ ಉತ್ಕರ್ಷಣ ನಿರೋಧಕವು ಮೆದುಳಿನ ಕೋಶಗಳ ಪೊರೆಯಲ್ಲಿರುವ ಕೊಬ್ಬನ್ನ ರಕ್ಷಿಸುತ್ತದೆ. ಸ್ವತಂತ್ರ ರಾಡಿಕಲ್‌ಗಳಿಂದಾಗುವ ಹಾನಿಯನ್ನ ತಡೆಯುತ್ತದೆ.
ಹೆಚ್ಚಿನ ಫೈಬರ್ ಮತ್ತು ಕಡಿಮೆ ಕೊಬ್ಬಿನ ಅಂಶವನ್ನ ಹೊಂದಿರುವ ಬದನೆಕಾಯಿ, ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನ ನಿಯಂತ್ರಿಸಲು ಮತ್ತು ಟೈಪ್ 2 ಮಧುಮೇಹಿಗಳಲ್ಲಿ ರಕ್ತದೊತ್ತಡವನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬದನೆಕಾಯಿಯಲ್ಲಿರುವ ವಿಟಮಿನ್ ಬಿ, ವಿಟಮಿನ್ ಸಿ, ಸತು ಮತ್ತು ಮೆಗ್ನೀಸಿಯಂನಂತಹ ಜೀವಸತ್ವಗಳು, ಖನಿಜಗಳು ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಉತ್ತೇಜಿಸುತ್ತವೆ.
ಬದನೆಕಾಯಿಯಲ್ಲಿರುವ ನಾಸುನಿನ್‌ನಂತಹ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್-ವಿರೋಧಿ ಗುಣಲಕ್ಷಣಗಳನ್ನ ಹೊಂದಿದ್ದು, ಹೊಸ ರಕ್ತನಾಳಗಳ ರಚನೆಯನ್ನ ತಡೆಯುತ್ತವೆ.
ಬದನೆಕಾಯಿಯು ಕಡಿಮೆ ಕ್ಯಾಲೋರಿ ಮತ್ತು ಕಡಿಮೆ ಕೊಬ್ಬಿನ ಆಹಾರವಾಗಿದ್ದು, ಇದರ ಸೇವನೆಯು ತೂಕ ನಷ್ಟಕ್ಕೆ ಸಹಾಯಕವಾಗಿದೆ.
ನಿಯಮಿತವಾಗಿ ಬದನೆಕಾಯಿ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಮತ್ತು ಹೊಟ್ಟೆಯ ಬೊಜ್ಜು ಕೂಡ ಕರಗುತ್ತದೆ.