ಮೊಸರಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ12, ಪೊಟ್ಯಾಸಿಯಮ್, ರಂಜಕ, ಕ್ಯಾಲ್ಸಿಯಂ, ಪೃಟೀನ್ ಮತ್ತು ಪ್ರೋಬಯಾಟಿಕ್ ಹೇರಳವಾಗಿದೆ.
ಮೊಸರು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ. ಮೊಸರಿನಲ್ಲಿ ಸಕ್ಕರೆ ಬೆರಸಿ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
ಮೊಸರಿನಲ್ಲಿ ಸಕ್ಕರೆ ಬೆರೆಸಿ ತಿನ್ನುವುದರಿಂದ ಶೀತ, ನೆಗಡಿ, ಕಫದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಊಟದ ಬಳಿಕ ಒಂದು ಕಪ್ ಮೊಸರಿನಲ್ಲಿ ಅರ್ಧ ಸ್ಪೂನ್ ಸಕ್ಕರೆ ಮಿಕ್ಸ್ ಮಾಡಿ ತಿನ್ನುವುದರಿಂದ ಅಸಿಡಿಟಿ ಸಮಸ್ಯೆಯಿಂದ ಸುಲಭವಾಗಿ ಮುಕ್ತರಾಗಬಹುದು.
ಮೊಸರು-ಸಕ್ಕರೆಯನ್ನು ಒಟ್ಟಿಗೆ ತಿನ್ನುವುದರಿಂದ ಹೊಟ್ಟೆ ಉರಿ ಸಮಸ್ಯೆ ತಕ್ಷಣವೇ ಶಮನವಾಗುತ್ತದೆ.
ದೇಹದ ಉಷ್ಣತೆ ಹೆಚ್ಚಾಗಿದ್ದರೆ ಅಂತಹ ಸಂದರ್ಭದಲ್ಲಿ ಮೊಸರು ಸಕ್ಕರೆ ತಿಂದರೆ ದೇಹ ತಂಪಾಗುತ್ತದೆ.
ಮೊಸರಿನಲ್ಲಿ ಸಕ್ಕರೆ ಬೆರೆಸಿ ತಿನ್ನುವುದರಿಂದ ಮೆದುಳು ಶಾಂತಗೊಳ್ಳುತ್ತದೆ.
ಮೊಸರಿನಲ್ಲಿ ಸಕ್ಕರೆ ಮಿಶ್ರಣ ಮಾಡಿ ತಿಂದರೆ ದೈಹಿಕ ಶಕ್ತಿ ಹೆಚ್ಚಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.