ತೊಡೆಗಳ ನಡುವೆ ತುರಿಕೆ, ಚರ್ಮದ ದದ್ದುಗಳ ಸಮಸ್ಯೆಗೆ ಈ ವಸ್ತುಗಳೇ ಬೆಸ್ಟ್ ಮದ್ದು!

Yashaswini V
Aug 07,2024

ತುರಿಕೆ

ಅತಿಯಾಗಿ ಬೆವರುವಿಕೆ, ಒದ್ದೆ ಬಟ್ಟೆಗಳನ್ನು ಧರಿಸುವುದು, ಸೋಂಕುಗಳಿಂದಾಗಿ ತೊಡೆಗಳ ನಡುವೆ ತುರಿಕೆ ಹೆಚ್ಚಾಗುತ್ತದೆ. ಆದರೆ, ಕೆಲವು ಮನೆಮದ್ದುಗಳಿಂದ ಇದಕ್ಕೆ ಸುಲಭ ಪರಿಹಾರ ಪಡೆಯಬಹುದು.

ಕರ್ಪೂರ ಕೊಬ್ಬರಿ ಎಣ್ಣೆ

ಕರ್ಪೂರವನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಪೀಡಿತ ಜಾಗಕ್ಕೆ ಹಚ್ಚುವುದರಿಂದ ತುರಿಕೆ ಸಮಸ್ಯೆ ನಿವಾರಣೆಯಾಗುತ್ತದೆ.

ಗ್ರೀನ್ ಟೀ

ಗ್ರೀನ್ ಟೀಯಲ್ಲಿ ಆಂಟಿ-ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕಗಳಿದ್ದು ಇದು ಚರ್ಮದ ಸೋಂಕಿನಿಂದಲೂ ರಕ್ಷಣೆ ನೀಡುತ್ತದೆ. ಗ್ರೀನ್ ಟೀ ತಯಾರಿಸಿ ಅದು ತಣ್ಣಗಾದ ಬಳಿಕ ತುರಿಕೆಯಿರುವ ಜಾಗದಲ್ಲಿ ಲೇಪಿಸಿ ಅರ್ಧಗಂಟೆ ಬಳಿಕ ಸ್ನಾನ ಮಾಡಿ.

ಹರಳೆಣ್ಣೆ

ಕರ್ಪೂರ, ಸಾಸಿವೆ ಎಣ್ಣೆಯೊಂದಿಗೆ ಹರಳೆಣ್ಣೆ ಬೆರೆಸಿ ಹಚ್ಚುವುದು ಕೂಡ ಚರ್ಮದ ತುರಿಕೆ ಸಮಸ್ಯೆಗೆ ಅತ್ಯುತ್ತಮ ಮದ್ದಾಗಿದೆ.

ಟೀ ಟ್ರೀ ಆಯಿಲ್

ಚರ್ಮದ ಅಲರ್ಜಿ ಸಮಸ್ಯೆಗೆ ಟೀ ಟ್ರೀ ಆಯಿಲ್ ಕೂಡ ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗುತ್ತದೆ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ತ್ವಚೆಯ ಅತ್ಯುತ್ತಮ ಏಜೆಂಟ್ ಆಗಿದ್ದು, ಬೆಚ್ಚಗಿನ ನೀರಿನಲ್ಲಿ ಇದನ್ನು ಬೆರೆಸಿ ಸೋಂಕಿತ ಪ್ರದೇಶದಲ್ಲಿ ಲೇಪಿಸುವುದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು.

ಅಲೋವೆರಾ

ತಾಜಾ ಅಲೋವೆರಾವನ್ನು ತುರಿಕೆ ಇರುವ ಜಾಗದಲ್ಲಿ ಲೇಪಿಸಿ ಬಳಿಕ ಶುದ್ಧ ನೀರಿನಿಂದ ಸ್ನಾನ ಮಾಡಿದರೆ ಹೆಚ್ಚು ಪ್ರಯೋಜನಕಾರಿ ಆಗಿದೆ.

ಬೇವು

ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಬೇವಿನ ಸೊಪ್ಪಿನ ಪೇಸ್ಟ್ ತಯಾರಿಸಿ ಪೀಡಿತ ಜಾಗದಲ್ಲಿ ಹಚ್ಚುವುದರಿಂದ ಅಲರ್ಜಿಯನ್ನು ಗುಣಪಡಿಸಬಹುದು.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story