ಸೌಮ್ಯ ಕೋವಿಡ್-19 ಲಕ್ಷಣಗಳಿಂದ ಪಾರಾಗಲು ಪರಿಣಾಮಕಾರಿ ಮನೆಮದ್ದುಗಳು

Published by: Yashaswini V | May 27, 2025

ಕೋವಿಡ್-19

ಕೋವಿಡ್-19 ಮಹಾಮಾರಿ ಮತ್ತೆ ಆತಂಕ ಸೃಷ್ಟಿಸುತ್ತಿದೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ದಾಖಲಾಗಿದೆ.

Published by: Yashaswini V | May 27, 2025

ಕೋವಿಡ್-19 ಮನೆಮದ್ದು

ಶಾಲೆಗಳು ಆರಂಭವಾಗುವ ಸಮಯದಲ್ಲೇ ಕೋವಿಡ್-19 ಸೋಂಕು ಹರಡುತ್ತಿರುವುದು ಪೋಷಕರನ್ನು ಹೆಚ್ಚು ಆಂತಕ್ಕೀಡು ಮಾಡಿದೆ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಸೌಮ್ಯ ಕೋವಿಡ್-19 ಲಕ್ಷಣಗಳಿಂದ ಪಾರಾಗಬಹುದು. ಅವುಗಳೆಂದರೆ...

Published by: Yashaswini V | May 27, 2025

ನಿಂಬೆ ನೀರು

ಬೆಳಿಗ್ಗೆ ಎದ್ದ ಕೂಡಲೇ ಬಿಸಿ ನೀರಿನಲ್ಲಿ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿಯುವುದರಿಂದ ಶೀತ, ಗಂಟಲು ನೋವಿನಿಂದ ಪರಿಹಾರ ದೊರೆಯುತ್ತದೆ. ಮಾತ್ರವಲ್ಲ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

Published by: Yashaswini V | May 27, 2025

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ. ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಒಂದೆರಡು ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಸೋಂಕುಗಳ ವಿರುದ್ಧ ರಕ್ಷಣೆ ಪಡೆಯಬಹುದು.

Published by: Yashaswini V | May 27, 2025

ತುಳಸಿ

ತುಳಸಿ ಎಲೆಗಳು ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು, ನಿತ್ಯ ಒಂದೆರಡು ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಶೀತ, ಕೆಮ್ಮಿನಿಂದ ಪರಿಹಾರ ದೊರೆಯುತ್ತದೆ.

Published by: Yashaswini V | May 27, 2025

ಕಷಾಯ

ಪ್ರತಿ ದಿನ ಬೆಳಿಗ್ಗೆ ಕರಿಮೆಣಸು, ಜೀರಿಗೆ, ಬೆಲ್ಲದಿಂದ ಕಷಾಯ ತಯಾರಿಸಿ ಕುಡಿಯುವುದರಿಂದ ಗಂಟಲು ನೋವಿನಿಂದ ಪರಿಹಾರ ಪಡೆಯುವುದರ ಜೊತೆಗೆ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

Published by: Yashaswini V | May 27, 2025

ಶುಂಠಿ ರಸ

ಶುಂಠಿ ರಸದೊಂದಿಗೆ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಕೆಮ್ಮು, ಕಫಾದಂತಹ ಸಮಸ್ಯೆಗಳಿಂದ ಸುಲಭ ಪರಿಹಾರ ದೊರೆಯುತ್ತದೆ.

Published by: Yashaswini V | May 27, 2025

ಅರಿಶಿನದ ಹಾಲು

ಅರಿಶಿನದಲ್ಲಿ ಆಂಟಿ ವೈರಲ್, ಉರಿಯೂತ ನಿವಾರಕ ಗುಣಲಕ್ಷಣಗಳಿದ್ದು, ನಿತ್ಯ ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಅರಿಶಿನದ ಹಾಲು ಕುಡಿಯುವುದರಿಂದ ಗಂಟಲು ನೋವು, ಕೆಮ್ಮಿನಿಂದ ಪರಿಹಾರ ದೊರೆಯುತ್ತದೆ.

Published by: Yashaswini V | May 27, 2025

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | May 27, 2025

VIEW ALL

Read Next Story