ಈ ಒತ್ತಡಭರಿತ ಜೀವನಶೈಲಿಯಲ್ಲಿ ನಿದ್ರಾಹೀನತೆ ಸಮಸ್ಯೆ ಬಹುತೇಕ ಮಂಡಿಯನ್ನು ಬಾಧಿಸುತ್ತಿದೆ. ನಿಮಗೂ ಈ ಸಮಸ್ಯೆ ಇದ್ದರೆ ಕೆಲವು ಸಿಂಪಲ್ ಟಿಪ್ಸ್ ಮಾಡುವ ಮೂಲಕ ಸುಲಭ ಪರಿಹಾರ ಪಡೆಯಬಹುದು.
ರಾತ್ರಿ ಭೋಜನದ ಬಳಿಕ ಸ್ವಲ್ಪ ಸಿಹಿ ತಿನಿಸು ತಿನ್ನುವುದರಿಂದ ಉತ್ತಮ ನಿದ್ರೆ ಪಡೆಯಲು ಸಾಧ್ಯವಾಗುತ್ತದೆ.
ಸ್ವಲ್ಪ ಜಾಯಿಕಾಯಿಯನ್ನು ಕಲ್ಲಿನ ಮೇಲೆ ಉಜ್ಜಿ ಅದನ್ನು ಕಣ್ಣು ರೆಪ್ಪೆಗಳ ಮೇಲೆ ಲೇಪಿಸಿದರೆ ಬೇಗನೆ ನಿದ್ರೆ ಬರುತ್ತದೆ.
ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಬೇಗ ನಿದ್ರೆ ಬರುತ್ತದೆ.
ಒಂದು ಲೋಟ ಬೆಚ್ಚಗಿನ ನೀರಿನಲ್ಲಿ 1 ಸ್ಪೂನ್ ತುಪ್ಪ ಮಿಕ್ಸ್ ಮಾಡಿ ಕುಡಿದ್ರೆ ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬೆಚ್ಚಗಿನ ಹಾಲು ಕುಡಿದರೆ ಬೇಗನೆ ನಿದ್ರೆಗೆ ಜಾರಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.