ಸಕ್ಕರೆಯು ಇನ್ಸುಲಿನ್ ಮಟ್ಟವನ್ನ ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧವ ಉಂಟುಮಾಡಬಹುದು, ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ.
ಅತಿಯಾದ ಸಕ್ಕರೆ ಸೇವನೆಯು ಹೃದ್ರೋಗದ ಅಪಾಯಕಾರಿ ಅಂಶಗಳೊಂದಿಗೆ ಸಂಬಂಧ ಹೊಂದಿದೆ.
ಸಕ್ಕರೆಯಲ್ಲಿರು ಹೆಚ್ಚು ಫ್ರಕ್ಟೋಸ್ ಸೇವನೆಯು ಲಿವರ್‌ನಲ್ಲಿ ಕೊಬ್ಬು ಶೇಖರಣೆಗೆ ಕಾರಣವಾಗುತ್ತದೆ. ಇದು ಫ್ಯಾಟಿ ಲಿವರ್ ಕಾಯಿಲೆಗೆ ಕಾರಣವಾಗುತ್ತದೆ.
ಅತಿಯಾದ ಸಕ್ಕರೆ ಸೇವನೆಯು ಹಲ್ಲಿನ ಕೊಳೆತಕ್ಕೆ ಕಾರಣವಾಗುತ್ತದೆ.
ಆಹಾರದಲ್ಲಿ ಸಕ್ಕರೆಯ ಅತಿಯಾದ ಸೇವನೆಯು ಉರಿಯೂತವನ್ನ ಹೆಚ್ಚಿಸಬಹುದು.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಒಟ್ಟು ದೈನಂದಿನ ಕ್ಯಾಲೊರಿಗಳಲ್ಲಿ 10%ಕ್ಕಿಂತ ಕಡಿಮೆ ಸಕ್ಕರೆ ಸೇವಿಸಬೇಕು.
ಸಂಸ್ಕರಿಸಿದ ಆಹಾರ, ಸಕ್ಕರೆ-ಸಿಹಿ ಪಾನೀಯಗಳ ಬದಲಿಗೆ ನೀರು ಕುಡಿಯಬೇಕು ಮತ್ತು ತಾಜಾ ಹಣ್ಣು, ತರಕಾರಿ, ಧಾನ್ಯಗಳನ್ನ ಸೇವಿಸುವುದರಿಂದ ಸಕ್ಕರೆ ಸೇವನೆ ನಿಯಂತ್ರಿಸಬಹುದು.