1. Fenugreek Water Side Effects: ಮೆಂತ್ಯೆ ನೀರು ಸೇವನೆಯಿಂದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಆದರೆ, ಪ್ರತಿಯೊಬ್ಬರ ವಿಷಯದಲ್ಲಿ ಇದು ಸರಿ ಅಲ್ಲ. (Health News In Kannada)

Nitin Tabib
Nov 13,2023


2. ಮಧುಮೇಹ ಇರಲಿ ಅಥವಾ ಕೂದಲುದುರುವಿಕೆ, ಹಸಿವೆಯಾಗದೆ ಇರುವುದಾಗಿರಲಿ ಅಥವಾ ಮಲಬದ್ಧತೆ ಸಮಸ್ಯೆ ಇರಲಿ ಜನರು ನಿಮಗೆ ಮೆಂತ್ಯ ನೀರನ್ನು ಸೇವಿಸಲು ಸಲಹೆ ನೀಡುತ್ತಾರೆ.


3. ಆದರೆ ಮೆಂತ್ಯ ನೀರು ಸೇವನೆಯಿಂದ ಕೆಲವರಿಗೆ ಉಸಿರಾಟದ ತೊಂದರೆ ಎದುರಾಗುತ್ತದೆ. ಇಂತಹ ಜನರು ವೈದ್ಯರ ಸಲಹೆ ಮೇರೆಗೆ ಮೆಂತ್ಯ ನೀರು ಸೇವಿಸುವುದು ಉತ್ತಮ.


4. ಹಲವು ಜನರಿಗೆ ಮೆಂತ್ಯ ನೀರು ಸೇವಿಸುವುದರಿಂದ ಕಹಿ ಡರಿಕೆಗಳು ಬರುತ್ತವೆ ಮತ್ತು ದೇಹದಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಇದರಿಂದ ಲೂಸ್ ಮೋಷನ್ ಕೂಡ ಆರಂಭಗೊಳ್ಳುತ್ತದೆ.


5. ಕೆಲವರಲ್ಲಿ ಇದರ ಸೇವನೆಯಿಂದ ಅಪಚನ ಸಮಸ್ಯೆ ಕೂಡ ಎದುರಾಗುತ್ತದೆ. ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಗ್ಯಾಸ್ ಉತ್ಪತ್ತಿಸಲು ಪ್ರಾರಂಭಿಸುತ್ತವೆ. ಇದರಿಂದ ಕೂಡ ಅಸ್ವಸ್ಥತೆ ಉಂಟಾಗಬಹುದು.


6. ಗರ್ಭವತಿ ಮಹಿಳೆಯರು ಮೆಂತ್ಯ ನೀರು ಸೇವನೆಯಿಂದ ಅಂತರ ಕಾಯ್ದುಕೊಳ್ಳಬೇಕು. ಏಕೆಂದರೆ ಕೆಲ ಮಹಿಳೆಯರಲ್ಲಿ ಇದು ಗರ್ಭಪಾತಕ್ಕೆ ಕಾರಣವಾಗಬಹುದು.


7. ಕೆಲ ಜನರಲ್ಲಿ ಮೆಂತ್ಯೆ ನೀರು ಸೇವನೆಯಿಂದ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲರ್ಜಿ ಸಮಸ್ಯೆ ಇರುವವರು ಇದನ್ನು ಸೇವಿಸಬಾರದು.


8. ಕೆಲ ಜನರಲ್ಲಿ ಇದು ಉಸಿರಾಟದ ಅಲರ್ಜಿಯನ್ನು ಕೂಡ ಉಂಟುಮಾಡುತ್ತದೆ.


9. (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

VIEW ALL

Read Next Story