ಪಾದಗಳಲ್ಲಿ ಊತದ ಸಮಸ್ಯೆ ನಿವಾರಣೆಗೆ 5 ಬೆಸ್ಟ್ ಮನೆಮದ್ದುಗಳಿವು
ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು ದೊಡ್ಡ ಅನಾರೋಗ್ಯ ಸಮಸ್ಯೆಯಲ್ಲದಿದ್ದರೂ ಇದು ಹಲವು ಸಮಸ್ಯೆಗಳಿಗೆ ಕರಣವಾಗುತ್ತದೆ.
ಅತಿಯಾದ ತೂಕ, ದೀರ್ಘ ಸಮಯದವರೆಗೆ ಕುಳಿತೇ ಇರುವುದು, ಹೆಚ್ಚು ನಿಲ್ಲುವುದು ಹೀಗೆ ಪಾದಗಳಲ್ಲಿ ಊತಕ್ಕೆ ಹಲವು ಕಾರಣಗಳಿವೆ. ಆದರೆ, ಕೆಲ ಮನೆಮದ್ದುಗಳ ಸಹಾಯದಿಂದ ಇದಕ್ಕೆ ಪರಿಹಾರವನ್ನು ಪಡೆಯಬಹುದು.
ದೀರ್ಘ ಸಮಯದವರೆಗೆ ಕುಳಿತೇ ಇರುವುದು, ಇಲ್ಲವೇ ನಿಂತಿರುವುದರಿಂದಲೂ ಪಾದಗಳಲ್ಲಿ ಊತ ಕಾಣಿಸಿಕೊಳ್ಳಬಹುದು. ಇದರಿಂದ ಪರಿಹಾರಕ್ಕಾಗಿ ಒಂದು ಬಕೆಟ್ ನಲ್ಲಿ ನೀವು ತಡೆಯುವಷ್ಟು ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ಉಪ್ಪು, ಅರಿಶಿನವನ್ನು ಹಾಕಿ ಕಾಲುಗಳನ್ನು ಅದರೊಳಗಿರಿಸಿ ಶಾಖ ತೆಗೆದುಕೊಳ್ಳಿ.
ಆಲಿವ್ ಅಥವಾ ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಈ ಎಣ್ಣೆಯನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ ಲಘುವಾಗಿ ಮಸಾಜ್ ಮಾಡಿ.
ಶುಂಠಿಯ ಸಿಪ್ಪೆಯನ್ನು ತೆಗೆದುಕೊಂಡು ಅದನ್ನು ಲಘುವಾಗಿ ಪಾದಗಳಿಗೆ ಉಜ್ಜಿ ಸ್ವಲ್ಪ ಸಮಯದ ಬಳಿಕ ಬೆಚ್ಚಗಿನ ನೀರಿನಿಂದ ಕಾಲನ್ನು ವಾಶ್ ಮಾಡಿ.
ಒಂದು ಕಪ್ ನೀರಿನಲ್ಲಿ ಒಂದರಡು ಸ್ಪೂನ್ ಕೊತ್ತಂಬರಿ ಬೀಜವನ್ನು ಹಾಕಿ ಅದು ಅರ್ಧವಾಗುವವರೆಗೂ ಚೆನ್ನಾಗಿ ಕುದಿಸಿ. ದಿನಕ್ಕೆರಡು ಬಾರಿ ಈ ನೀರನ್ನು ಕುಡಿಯುವುದರಿಂದ ಪಾದಗಳಲ್ಲಿ ಊತವನ್ನು ನಿವಾರಿಸಬಹುದು.
ಪಾದಗಳನ್ನು ಹಿಗ್ಗಿಸುವುದು, ಈಜುವುದು ಇತ್ಯಾದಿ ಪಾದಕ್ಕೆ ಸಂಬಂಧಿಸಿದ ವ್ಯಾಯಾಮ ಮಾಡುವುದರಿಂದಲೂ ಪಾದಗಳಲ್ಲಿ ಊತವನ್ನು ಕಡಿಮೆ ಮಾಡಬಹುದು. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.