ಬೇಸಿಗೆಯಲ್ಲಿ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ BP ನಿಯಂತ್ರಣದಲ್ಲಿರುತ್ತದೆ..!

Bhavishya Shetty
Apr 06,2025

ಕಾರಣ

ಬೇಸಿಗೆಯಲ್ಲಿ ರಕ್ತದೊತ್ತಡ (ಬಿಪಿ) ಹೆಚ್ಚಾಗಲು ಹಲವು ಕಾರಣಗಳಿವೆ. ಬಿಸಿ ವಾತಾವರಣ, ನಿರ್ಜಲೀಕರಣ, ಆಹಾರ ಪದ್ಧತಿ ಮತ್ತು ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಹೀಗಿರುವಾಗ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಬೇಸಿಗೆಯಲ್ಲಿ ಬಿಪಿ ನಿಯಂತ್ರಿಸಬಹುದು.

ನಿರ್ಜಲೀಕರಣ

ನಿರ್ಜಲೀಕರಣ: ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆಯಿಂದ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ದಿನಕ್ಕೆ ಕನಿಷ್ಠ 8-10 ಗ್ಲಾಸ್ ನೀರು ಕುಡಿಯಿರಿ. ಕಲ್ಲಂಗಡಿ, ಸೌತೆಕಾಯಿ, ಮಜ್ಜಿಗೆ ಮತ್ತು ತೆಂಗಿನ ನೀರನ್ನು ಸೇವಿಸುವುದು ಒಳ್ಳೆಯದು.

ಆಹಾರ

ಉಪ್ಪು ಕಡಿಮೆ ಇರುವ ಆಹಾರವನ್ನು ಸೇವಿಸಿ. ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರಗಳನ್ನು (ಬಾಳೆಹಣ್ಣು, ಆಲೂಗಡ್ಡೆ, ಹಸಿರು ತರಕಾರಿಗಳು) ಸೇವಿಸಬೇಕು. ಸಂಸ್ಕರಿಸಿದ ಆಹಾರಗಳು, ಹುರಿದ ಆಹಾರಗಳು ಮತ್ತು ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡಬೇಕು.

ವ್ಯಾಯಾಮ

ನಿಯಮಿತ ವ್ಯಾಯಾಮವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನಡಿಗೆ, ಯೋಗ ಮತ್ತು ಧ್ಯಾನದಂತಹ ಕೆಲಸಗಳನ್ನು ಮಾಡಬಹುದು. ಹೆಚ್ಚಿನ ಶಾಖದ ಸಮಯದಲ್ಲಿ ವ್ಯಾಯಾಮ ಮಾಡಬೇಡಿ.

ಒತ್ತಡ ಕಡಿಮೆ ಮಾಡಿ

ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು. ಯೋಗ, ಧ್ಯಾನ ಮತ್ತು ಸಂಗೀತ ಕೇಳಬಹುದು. ಸಾಕಷ್ಟು ನಿದ್ರೆ ಪಡೆಯಿರಿ.

ಮದ್ಯಪಾನ -ಧೂಮಪಾನ

ಮದ್ಯಪಾನ ಮತ್ತು ಧೂಮಪಾನವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಅವುಗಳನ್ನು ತಪ್ಪಿಸಬೇಕು.

ಔಷಧಿ

ವೈದ್ಯರು ಸೂಚಿಸಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು. ಬಿಪಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು.

ಸೂಚನೆ

ಇದನ್ನು ಅಳವಡಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story