ವಿಟಮಿನ್ ಬಿ 12 ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ವಿಟಮಿನ್ ಬಿ 12 ದೇಹದಲ್ಲಿ ತನ್ನಷ್ಟಕ್ಕೆ ಉತ್ಪತ್ತಿಯಾಗುವುದಿಲ್ಲ.
ದೇಹದಲ್ಲಿ ಬಿ 12 ಉತ್ಪತ್ತಿಯಾಗಬೇಕಾದರೆ ಕೆಲವೊಂದು ವಸ್ತುಗಳನ್ನು ಸೇವಿಸಬೇಕು.
ಒಂದು ವೇಳೆ ನಿಮ್ಮ ದೇಹದಲ್ಲಿಯೂ ವಿಟಮಿನ್ ಬಿ 12 ಕೊರತೆಯಿದ್ದರೆ ಈ ಕೆಳಗಿನ ಆಹಾರ ವಸ್ತುಗಳನ್ನು ಸೇವಿಸುವ ಮೂಲಕ ಈ ಕೊರತೆಯನ್ನು ಸರಿದೂಗಿಸಬಹುದು.
ಮಾಂಸವು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ. ಪ್ರತಿದಿನ ಮಾಂಸವನ್ನು ಸೇವಿಸಿದರೆ, ದೇಹಕ್ಕೆ ವಿಟಮಿನ್ ಬಿ 12 ಹೇರಳವಾಗಿ ಸಿಗುತ್ತದೆ.
ಟ್ಯೂನ ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಖನಿಜಗಳು ಸೇರಿದಂತೆ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ಈ ಮೀನಿನಲ್ಲಿ ವಿಟಮಿನ್ ಬಿ 12 ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತದೆ.
ಹಾಲು ಮತ್ತು ಇತರ ಡೈರಿ ಉತ್ಪನ್ನಗಳಾದ ಮೊಸರು, ಚೀಸ್, ಬೆಣ್ಣೆ, ಪನೀರ್ ಇವುಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸೇರಿದಂತೆ ಅನೇಕ ಜೀವಸತ್ವಗಳಿರುತ್ತವೆ.
ಮೀನು ಮಾಂಸ ತಿನ್ನದೇ ಇರುವವರು ಪ್ರತಿದಿನ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಇದನ್ನು ಸೇವಿಸುವುದರಿಂದ ವಿಟಮಿನ್ ಬಿ12 ಕೊರತೆ ದೂರವಾಗುತ್ತದೆ.
ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕಾಡುತ್ತಿದ್ದರೆ ಪ್ರತಿದಿನ ಮೊಟ್ಟೆ ಸೇವಿಸಬೇಕು. ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.