ಐರನ್ ಕೊರತೆ ನೀಗಿಸಲು ಈ ಆಹಾರ ಸೇವಿಸಿ !

Published by: Ranjitha R K | May 03, 2024

ಕೆಂಪು ರಕ್ತ ಕಣ

ದೇಹದಲ್ಲಿ ಕಬ್ಬಿಣದ ಕೊರತೆ ಎಂದರೆ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸುವಲ್ಲಿ ನೆರವಾಗುವ ಕೆಂಪು ರಕ್ತ ಕಣಗಳ ಪ್ರಮಾಣದಲ್ಲಿ ಇಳಿಕೆ ಎಂದರ್ಥ.

Published by: Ranjitha R K | May 03, 2024

ಐರನ್ ಕೊರತೆ

ದೇಹದಲ್ಲಿ ಕಬ್ಬಿಣದ ಕೊರತೆ ಎದುರಿಸುತ್ತಿದ್ದರೆ, ಬೇರೆ ಬೇರೆ ಸಮಸ್ಯೆಗಳು ಕೂಡಾ ಕಾಡಲು ಆರಂಭಿಸುತ್ತದೆ.

Published by: Ranjitha R K | May 03, 2024

ಐರನ್ ಕೊರತೆ ಪರಿಣಾಮ

ಕಬ್ಬಿಣದ ಕೊರತೆಯ ಲಕ್ಷಣಗಳು ಆಯಾಸ, ತಲೆನೋವು, ಚಡಪಡಿಕೆ, ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್, ಹೃದಯ ಸಮಸ್ಯೆಗಳು, ಗರ್ಭಾವಸ್ಥೆಯ ತೊಂದರೆಗಳು, ನಿಧಾನ ಬೆಳವಣಿಗೆಯನ್ನು ಒಳಗೊಂಡಿರುತ್ತದೆ.

Published by: Ranjitha R K | May 03, 2024

ಸೊಪ್ಪು :

ಫುಡ್ಸ್ ಡೇಟಾ ಸೆಂಟರ್ ಪ್ರಕಾರ, 100 ಗ್ರಾಂ ಪಾಲಕ್ ಸೊಪ್ಪಿನಲ್ಲಿ 2.7 ಮಿಗ್ರಾಂ ಕಬ್ಬಿಣಡ ಅಂಶ ಇರುತ್ತದೆ. ಅಷ್ಟು ಮಾತ್ರವಲ್ಲದೆ, ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.

Published by: Ranjitha R K | May 03, 2024

ಕಡಲೆ ಕಾಳು :

ಒಂದು ಕಪ್ ಬೇಯಿಸಿದ ಕಡಲೆಯು ಸುಮಾರು 6.6 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಕಡಲೆ ಕಾಳು ಅತ್ಯುತ್ತಮ ಪರಿಹಾರವಾಗಿದೆ.

Published by: Ranjitha R K | May 03, 2024

ಕುಂಬಳಕಾಯಿ ಬೀಜಗಳು :

28 ಗ್ರಾಂ ಕುಂಬಳಕಾಯಿ ಬೀಜಗಳಲ್ಲಿ 2.5 ಮಿಗ್ರಾಂ ಕಬ್ಬಿಣವಿರುತ್ತದೆ. ಇದಲ್ಲದೆ ವಿಟಮಿನ್ ಕೆ, ಸತು, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ ನಿಂದಲೂ ಕುಂಬಳಕಾಯಿ ಬೀಜಗಳು ಸಮೃದ್ಧವಾಗಿದೆ.

Published by: Ranjitha R K | May 03, 2024

ಬ್ರೊಕೊಲಿ

1 ಕಪ್ ಬೇಯಿಸಿದ ಬ್ರೊಕೊಲಿ 1 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಅಲ್ಲದೆ, ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಇದು ದೇಹವು ಕಬ್ಬಿಣವನ್ನು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

Published by: Ranjitha R K | May 03, 2024

ಡಾರ್ಕ್ ಚಾಕೊಲೇಟ್ :

28 ಗ್ರಾಂ ಡಾರ್ಕ್ ಚಾಕೊಲೇಟ್ 3.4 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಇದರೊಂದಿಗೆ ಇದನ್ನು ಸೇವಿಸುವುದರಿಂದ ಮೆಗ್ನೀಸಿಯಮ್ ಮತ್ತು ತಾಮ್ರವೂ ಕೂಡಾ ದೇಹಕ್ಕೆ ದೊರೆಯುತ್ತದೆ.

Published by: Ranjitha R K | May 03, 2024

ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

Published by: Ranjitha R K | May 03, 2024

VIEW ALL

Read Next Story