ದೇಹದಲ್ಲಿ ಕಬ್ಬಿಣದ ಕೊರತೆ ಎಂದರೆ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸುವಲ್ಲಿ ನೆರವಾಗುವ ಕೆಂಪು ರಕ್ತ ಕಣಗಳ ಪ್ರಮಾಣದಲ್ಲಿ ಇಳಿಕೆ ಎಂದರ್ಥ.
ದೇಹದಲ್ಲಿ ಕಬ್ಬಿಣದ ಕೊರತೆ ಎದುರಿಸುತ್ತಿದ್ದರೆ, ಬೇರೆ ಬೇರೆ ಸಮಸ್ಯೆಗಳು ಕೂಡಾ ಕಾಡಲು ಆರಂಭಿಸುತ್ತದೆ.
ಕಬ್ಬಿಣದ ಕೊರತೆಯ ಲಕ್ಷಣಗಳು ಆಯಾಸ, ತಲೆನೋವು, ಚಡಪಡಿಕೆ, ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್, ಹೃದಯ ಸಮಸ್ಯೆಗಳು, ಗರ್ಭಾವಸ್ಥೆಯ ತೊಂದರೆಗಳು, ನಿಧಾನ ಬೆಳವಣಿಗೆಯನ್ನು ಒಳಗೊಂಡಿರುತ್ತದೆ.
ಫುಡ್ಸ್ ಡೇಟಾ ಸೆಂಟರ್ ಪ್ರಕಾರ, 100 ಗ್ರಾಂ ಪಾಲಕ್ ಸೊಪ್ಪಿನಲ್ಲಿ 2.7 ಮಿಗ್ರಾಂ ಕಬ್ಬಿಣಡ ಅಂಶ ಇರುತ್ತದೆ. ಅಷ್ಟು ಮಾತ್ರವಲ್ಲದೆ, ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.
ಒಂದು ಕಪ್ ಬೇಯಿಸಿದ ಕಡಲೆಯು ಸುಮಾರು 6.6 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ದೇಹದಲ್ಲಿ ಕಬ್ಬಿಣದ ಅಂಶವನ್ನು ಹೆಚ್ಚಿಸಲು ಕಡಲೆ ಕಾಳು ಅತ್ಯುತ್ತಮ ಪರಿಹಾರವಾಗಿದೆ.
28 ಗ್ರಾಂ ಕುಂಬಳಕಾಯಿ ಬೀಜಗಳಲ್ಲಿ 2.5 ಮಿಗ್ರಾಂ ಕಬ್ಬಿಣವಿರುತ್ತದೆ. ಇದಲ್ಲದೆ ವಿಟಮಿನ್ ಕೆ, ಸತು, ಮ್ಯಾಂಗನೀಸ್ ಮತ್ತು ಮೆಗ್ನೀಸಿಯಮ್ ನಿಂದಲೂ ಕುಂಬಳಕಾಯಿ ಬೀಜಗಳು ಸಮೃದ್ಧವಾಗಿದೆ.
1 ಕಪ್ ಬೇಯಿಸಿದ ಬ್ರೊಕೊಲಿ 1 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಅಲ್ಲದೆ, ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಇದು ದೇಹವು ಕಬ್ಬಿಣವನ್ನು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
28 ಗ್ರಾಂ ಡಾರ್ಕ್ ಚಾಕೊಲೇಟ್ 3.4 ಮಿಗ್ರಾಂ ಕಬ್ಬಿಣವನ್ನು ಹೊಂದಿರುತ್ತದೆ. ಇದರೊಂದಿಗೆ ಇದನ್ನು ಸೇವಿಸುವುದರಿಂದ ಮೆಗ್ನೀಸಿಯಮ್ ಮತ್ತು ತಾಮ್ರವೂ ಕೂಡಾ ದೇಹಕ್ಕೆ ದೊರೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.