ಮಕ್ಕಳಿಂದ ಹಿಡಿದು ಮುದುಕರವರೆಗೆ ಹಲ್ಲಿನ ಸಮಸ್ಯೆ ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ದಿನಕ್ಕೆ ಎರಡು ಬಾರಿ ಬ್ರಶ್ ಮಾಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇದರೊಂದಿಗೆ ಆಹಾರಪದ್ದತಿಯಲ್ಲಿ ಕೆಲವು ಆಹಾರಗಳನ್ನು ಸೇರಿದರೆ ಗಟ್ಟಿಮುಟ್ಟಾದ ಆರೋಗ್ಯಕರ ಹಲ್ಲುಗಳನ್ನು ಹೊಂದಲು ಸಹಕಾರಿ ಆಗಿದೆ.
ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕವೆಂದು ಪರಿಗಣಿಸಿರುವ ನೀರು ಹಲ್ಲಿನ ಆರೋಗ್ಯಕ್ಕೂ ವರದಾನ. ಆಗಾಗ್ಗೆ ನೀರು ಕುಡಿಯುವುದರಿಂದ ಬಾಯಲ್ಲಿ ಲಾಲಾರಸ ಉತ್ಪಾದನೆ ಆಗುವುದರೊಂದಿಗೆ ಹಲ್ಲುಗಳು ಸಹ ಸ್ಟ್ರಾಂಗ್ ಆಗುತ್ತವೆ.
ತಾಜಾ ಹಸಿರು ಸೊಪ್ಪುಗಳಲ್ಲಿ ಕ್ಯಾಲ್ಸಿಯಂ, ಫೋಲಿಕ್ ಆಮ್ಲ ಹೇರಳವಾಗಿದ್ದು ದೈನಂದಿನ ಆಹಾರದಲ್ಲಿ ಇದರ ಬಳಕೆಯಿಂದ ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು, ದಂತ ಕವಚಗಳ ರಕ್ಷಣೆಗೆ ಉಪಯೋಗವಾಗಿದೆ.
ಕ್ಯಾರೆಟ್, ಸೇಬಿನಂತಹ ತರಕಾರಿ ಮತ್ತು ಹಣ್ಣುಗಳು ಬಾಯಲ್ಲಿ ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಜೊತೆಗೆ ನ್ಯಾಚುರಲ್ ಆಗಿ ಹಲ್ಲುಗಳನ್ನು ಕ್ಲೀನ್ ಮಾಡುವಲ್ಲಿಯೂ ಪರಿಣಾಮಕಾರಿಯಾಗಿದ್ದು ಹಲ್ಲುಗಳನ್ನು ಆರೋಗ್ಯವಾಗಿರಿಸುತ್ತವೆ.
ವಿಟಮಿನ್ ಡಿ ಸಮೃದ್ಧವಾಗಿರುವ ಸಾಲ್ಮನ್ ಫಿಶ್ ನಂತಹ ಆಹಾರಗಳು ದೇಹವು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯಕವಾಗಿವೆ. ಇವು ಹಣ್ಣುಗಳನ್ನು ಗಟ್ಟಿಗೊಳಿಸುತ್ತವೆ.
ಸ್ಟ್ರಾಬೆರಿ, ನಿಂಬೆ, ಕಿತ್ತಳೆ, ಕಿವಿ ಹಣ್ಣಿನಂತಹ ಆಹಾರಗಳ ಸೇವನೆಯು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಇವು ಉರಿಯೂತವನ್ನು ಶಮನಗೊಳಿಸಿ ಹಲ್ಲುಗಳನ್ನು ಸ್ವಚ್ಛವಾಗಿ, ಆರೋಗ್ಯವಾಗಿರಿಸುವಲ್ಲಿ ಪ್ರಯೋಜನಕಾರಿ ಆಗಿವೆ.
ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿರುವ ಹಾಲಿನ ಉತ್ಪನ್ನಗಳನ್ನು ದೈನಂದಿನ ಆಹಾರದಲ್ಲಿ ಬಳಸುವುದರಿಂದ ಇದು ಹಲ್ಲಿನ ದಂತಕವಚವನ್ನು ಬಲಪಡಿಸುತ್ತವೆ. ಜೊತೆಗೆ ಹಲ್ಲುಗಳನ್ನು ಸಹ ಗಟ್ಟಿಯಾಗಿಸುತ್ತವೆ.
ಆಂಟಿಆಕ್ಸಿಡೆಂಟ್‌ಗಳಲ್ಲಿ ಹೇರಳವಾಗಿರುವ ಬ್ಲೂಬೆರ್ರಿಗಳು ಮತ್ತು ಕ್ರ್ಯಾನ್‌ಬೆರಿಗಳಂತ ಹಣ್ಣುಗಳಲ್ಲಿ ಪಾಲಿಫಿನಾಲ್‌ಗಳಿದ್ದು ಇವುಗಳ ನಿಯಮಿತ ಸೇವನೆಯಿಂದ ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾ ಬೆಳವಣಿಗೆ, ಕೊಳಕು ಸಂಗ್ರಹವಾಗುವುದನ್ನು ತಪ್ಪಿಸಬಹುದು. ಜೊತೆಗೆ ಹಲ್ಲುಗಳ ಸಮಸ್ಯೆಗಳಿಂದಲೂ ಪರಿಹಾರ ಸಿಗುತ್ತದೆ.
ಸಾಮಾನ್ಯ ಟೀ ಬದಲಿಗೆ ಪಾಲಿಫಿನಾಲ್‌ಗಳು ಸಮೃದ್ಧವಾಗಿರುವ ಗ್ರೀನ್ ಟೀ, ಬ್ಲಾಕ್ ಟೀಗಳ ಸೇವನೆಯಿಂದ ಹಲ್ಲುಗಳಲ್ಲಿ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಬಹುದು. ಇದು ಒಟ್ಟಾರೆ ಹಲ್ಲುಗಳ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.