ಬೇಸಿಗೆಯಲ್ಲಿ ದೇಹ ತಂಪಾಗಿಸಲು ಈ ಸ್ಪೆಷಲ್ ಶರಬತ್ ಸೇವಿಸಿ

Ranjitha R K
Apr 18,2024

ಬೇಸಿಗೆ ಶರಬತ್

ಬೇಸಿಗೆಯಲ್ಲಿ ವಿಪರೀತ ಸೆಖೆಯ ಕಾರಣ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಆಗಾಗ ನೀರು ಸೇವಿಸುತ್ತಿರುವುದು ಅನಿವಾರ್ಯ. ಇನ್ನುನೀರಿನ ಬದಲು ಶರಬತ್ತು ಸೇವನೆ ಕೂಡಾ ಸಹಕಾರಿ.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್ ಅನೇಕ ಪೋಷಕ ತತ್ವವನ್ನು ಒಳಗೊಂಡಿದೆ. ಇದು ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ.

ದಾಳಿಂಬೆ ಜ್ಯೂಸ್

ಬೇಸಿಗೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ.

ಹುರಿಗಡಲೆ ಜ್ಯೂಸ್

ಹುರಿಗಡಲೆಯ ಜ್ಯೂಸ್ ಅನ್ನು ಕೂಡಾ ಬೇಸಿಗೆಯಲ್ಲಿ ಸೇವಿಸಬಹುದು. ಇದು ಕೂಡಾ ದೇಹವನ್ನು ತಂಪಾಗಿರಿಸುತ್ತದೆ.

ಹುರಿಗಡಲೆ ಜ್ಯೂಸ್

ಹುರಿಗಡಲೆಯ ಜ್ಯೂಸ್ ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸುತ್ತದೆ. ಇದರಲ್ಲಿರುವ ಫೈಬರ್ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

ಬೆಲ್ಲದ ಹಣ್ಣು

ಬೆಲ್ಲದ ಹಣ್ಣು ಕೂಡಾ ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಬೆಲ್ಲದ ಹಣ್ಣು

ಈ ಹಣ್ಣಿನ ತಿರುಳನ್ನು ತೆಗೆದು ಮ್ಯಾಶ್ ಮಾಡಿ ಅದಕ್ಕೆ ಐಸ್ ಸೇರಿಸಿ ಕುಡಿದರೆ ಬೇಸಿಗೆಯಲ್ಲಿ ಬಹಳ ತಂಪಾಗಿರುತ್ತದೆ.

ಗುಲಾಬಿ ದಳ

ಬೇಸಿಗೆಯಲ್ಲಿ ಗುಲಾಬಿ ದಳಗಳಿಂದ ಮಾಡಿದ ಶರಬತ್ತು ಸೇವಿಸಿದರೆ ದೇಹಕ್ಕೆ ಹೊಸ ಉತ್ಸಾಹ ಸಿಗುತ್ತದೆ.


ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story