ಕೊಲೆಸ್ಟ್ರಾಲ್ ಕರಗಿಸುವ ಶಕ್ತಿ ಇರುವ ಅದ್ಭುತ ಹಣ್ಣುಗಳಿವು!

Ranjitha R K
Jan 29,2025


ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರದ ಕಾರಣದಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್ ಮಟ್ಟವನ್ನು ಕೆಲವು ಸರಳ, ನೈಸರ್ಗಿಕ ವಿಧಾನಗಳಲ್ಲಿ ನಿಯಂತ್ರಿಸಬಹುದು. ಇವುಗಳಲ್ಲಿ ಹಣ್ಣುಗಳೂ ಪ್ರಮುಖ ಪಾತ್ರವಹಿಸುತ್ತವೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುವ ಹಣ್ಣು

ಕೆಲವು ಹಣ್ಣುಗಳನ್ನು ಸಿಪ್ಪೆ ಸಮೇತ ತಿಂದರೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.

ಸಪೋಟ

ಸಪೋಟಾ ಹಣ್ಣಿನಂತೆ ಸಪೋಟಾದ ಸಿಪ್ಪೆಯೂ ಆರೋಗ್ಯಕರ. ಸಪೋಟಾ ಸಿಪ್ಪೆಯಲ್ಲಿ ಕಬ್ಬಿಣ ಮತ್ತು ಪೊಟ್ಯಾಶಿಯಂ ಇದೆ.ಇದನ್ನು ಸೇವಿಸುವ ಮೂಲಕ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು.

ಆಪಲ್

ಸೇಬು ಹಣ್ಣನ್ನು ಸಿಪ್ಪೆ ಸಮೇತ ಸೇವಿಸಿದರೆ ದೇಹಕ್ಕೆ ವಿಟಮಿನ್ ಎ, ಸಿ ಮತ್ತು ಕೆ ಸಮೃದ್ಧವಾಗಿ ಸಿಗುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಈ ಹಣ್ಣನ್ನು ಸಿಪ್ಪೆ ಸಮೇತ ಸೇವಿಸಬೇಕು.

ಕಿವಿ

ಜನರು ಸಾಮಾನ್ಯವಾಗಿ ಕಿವಿ ಹಣ್ಣನ್ನು ಸಿಪ್ಪೆ ಸುಲಿದೇ ತಿನ್ನುತ್ತಾರೆ. ಆದರೆ ಕಿವಿ ಹಣ್ಣನ್ನು ಸಿಪ್ಪೆ ಸಮೇತ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಪೇರಳೆ

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಪೇರಳೆ ಒಳ್ಳೆಯದು . ಪೇರಳೆ ಸಿಪ್ಪೆ ಸಮೇತ ಸೇವಿಸುವ ಮೂಲಕ ಕೊಲೆಸ್ಟ್ರಾಲ್ ಸಮಸ್ಯೆ ನೀಗಿಸಬಹುದು.


ಈ ಹಣ್ಣುಗಳನ್ನು ಅವುಗಳ ಚರ್ಮದೊಂದಿಗೆ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಸೇವಿಸುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು.


ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.

VIEW ALL

Read Next Story