ಹಣ್ಣುಗಳು ಆರೋಗ್ಯಕ್ಕೆ ಉತ್ತಮವೇ ಆದರೂ ಸಹ ಮಧುಮೇಹಿಗಳು ಎಲ್ಲಾ ಹಣ್ಣುಗಳನ್ನು ತಿನ್ನಲು ಸಾಧ್ಯವಿಲ್ಲ. ಇದರಿಂದ ಅವರ ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾಗುವ ಅಪಾಯವಿರುತ್ತದೆ.
ಆದಾಗ್ಯೂ, ಬೇಸಿಗೆ ಕಾಲದಲ್ಲಿ ಮಧುಮೇಹಿಗಳು ಯಾವುದೇ ಚಿಂತೆಯಿಲ್ಲದೆಯೇ ಕೆಲವು ಹಣ್ಣುಗಳನ್ನು ತಿನ್ನಬಹುದು. ಇವನ್ನೂ ತಿಂದರೆ ಶುಗರ್ ಲೆವೆಲ್ ಹೆಚ್ಚಾಗುವ ಭಯವೂ ಇರುವುದಿಲ್ಲ.
ಬೆರ್ರಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಈ ಹಣ್ಣುಗಳಲ್ಲಿ ಗ್ಲೈಸೆಮಿಕ್ ಸೂಚಿ ಕಡಿಮೆ ಇರುವುದರಿಂದ ಇದು ಬ್ಲಡ್ ಶುಗರ್ ನಿಯಂತ್ರಣಕ್ಕೆ ಸಹಕಾರಿ ಆಗಲಿದೆ.
ಪೇರಲ ಅಥವಾ ಸೀಬೆ ಹಣ್ಣಿನಲ್ಲಿರುವ ಕೆಲವು ಪೋಷಕಾಂಶಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಬೆಂಬಲಿಸಿ, ಶುಗರ್ ಲೆವೆಲ್ ಸ್ಥಿರವಾಗಿರುವಂತೆ ಮಾಡುತ್ತದೆ. ಹಾಗಾಗಿ ಇದನ್ನು ಮಧುಮೇಹಿಗಳ ಸ್ನೇಹಿ ಎನ್ನಲಾಗುತ್ತದೆ.
ಉತ್ಕರ್ಷಣ ನಿರೋಧಕಗಳು, ಕರಗುವ ಫೈಬರ್ ನಿಂದ ತುಂಬಿರುವ ಸೇಬು ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿ ಆಗಿದೆ. ಹಾಗಾಗಿ, ಮಧುಮೇಹಿಗಳು ಮಿತ ಪ್ರಮಾಣದಲ್ಲಿ ಸೇಬನ್ನು ಸೇವಿಸಬಹುದು.
ಪರಂಗಿಹಣ್ಣು ಮಧ್ಯಮ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದ್ದು ಜೀರ್ಣಕಾರಿ ಕಿಣ್ವಗಳು, ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ಅಷ್ಟೇ ಅಲ್ಲದೆ, ಶುಗರ್ ಲೆವೆಲ್ ನಿಯಂತ್ರಿಸಲು ಕೂಡ ಸಹಕಾರಿ ಆಗಿದೆ.
ನೀರಿನ ಅಂಶ ಅಧಿಕವಾಗಿರುವ ಕಲ್ಲಂಗಡಿಯು ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆ ಇಲ್ಲ. ಬೇಸಿಗೆಯಲ್ಲಿ ಇದರ ಸೇವಣೆಯಿದ್ನ ದೇಹ ಹೈಡ್ರೇಟ್ ಆಗಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.