ಅವಕಾಡೋ ಹಣ್ಣಿನಲ್ಲಿ ಒಮೆಗಾ 3 ಅಂಶಗಳು ಸಮೃದ್ದವಾಗಿದೆ, ಇದು ಕೊಲಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಸುದಾರಿಸಲು ಸಹಾಯ ಮಾಡುತ್ತದೆ.
ಪೇರಳೆ ಹಣ್ಣಿನಲ್ಲಿ ನಾರಿನಾಂಶ ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚಾಚಗಿದ್ದು, ಇದು ರಕ್ತದಲ್ಲಿನ ಕೆಟ್ಟ ಕೊಲಸ್ಟ್ರಾಲ್ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಕಿವಿ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿದೆ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲಸ್ಟ್ರಾಲ್ ಅನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ.
ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು ದೇಹದಲ್ಲಿನ ಕೆಟ್ಟ ಕೊಲಸ್ಟ್ರಾಲ್ ಅನ್ನು ಕರಗಿಸಿ, ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ಕಿತ್ತಳೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿದ್ದು, ಇದು ದೇಹದಲ್ಲಿ ಕೆಟ್ಟ ಕೊಲಸ್ಟ್ರಾಲ್ ಅನ್ನು ಕರಗಿಸುತ್ತದೆ.
ನೇರಳೆ ಹಣ್ಣು ಫೈಬರ್ ಅಂಶದಿಂದ ಸಮೃದ್ಧವಾಗಿದೆ. ಚಳಿಗಾಲದಲ್ಲಿ ಇದರ ನಿಯಮಿತ ಸೇವನೆ ದೇಹದಲ್ಲಿನ ಕೆಟ್ಟ ಕೊಲಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಸ್ಟ್ರಾಬೆರಿ ಹಣ್ಣು ಫೈಬರ್ ಹಾಗೂ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ, ಇದು ಕೊಲೆಸ್ಟ್ರಾಲ್ ತೆಗೆದು ಹಾಕಿ ನಿಮ್ಮನ್ನು ಆರೋಗ್ಯ ವಾಗಿಡುತ್ತದೆ.