ವಿಶ್ವಾದ್ಯಂತ ಲಕ್ಷಾಂತರ ಜನರು ಬ್ಲಡ್ ಶುಗರ್ ಸಮಸ್ಯೆಗೆ ತುತ್ತಾಗಿದ್ದಾರೆ. ಮಧುಮೇಹ ನಿಯಂತ್ರಣ ಮಾಡಲು ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವ ಮತ್ತು ಸರಿಯಾದ ಆಹಾರವನ್ನು ಸೇವಿಸುವ ಅಗತ್ಯವಿದೆ.
ಮಧುಮೇಹಿಗಳು ಮತ್ತು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಕೆಲವೊಮ್ಮೆ ತಾವು ಆರಿಸುವ ಹಣ್ಣುಗಳು ಮತ್ತು ತರಕಾರಿಗಳು ಎಷ್ಟು ಸುರಕ್ಷಿತ ಮತ್ತು ಪ್ರಯೋಜನಕಾರಿ ಎಂಬ ಬಗ್ಗೆ ಗೊಂದಲ ಹೊಂದಿರುತ್ತಾರೆ.
ಹೀಗಾಗಿ ಕೆಲವು ಆರೋಗ್ಯಕರ, ಪೌಷ್ಟಿಕ ಮತ್ತು ಸುರಕ್ಷಿತವಾದ ವಿವಿಧ ರೀತಿಯ ತಾಜಾ ಹಣ್ಣುಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಗ್ಲೈಸೆಮಿಕ್ ಇಂಡೆಕ್ಸ್ 35 ಮತ್ತು ಗ್ಲೈಸೆಮಿಕ್ ಲೋಡ್ 3.9 ಸೂಚ್ಯಂಕ ಹೊಂದಿರುವ ಇದು ಪ್ಲಮ್ ಮಧುಮೇಹಿಗಳಿಗೆ ಬಹಳಷ್ಟು ಪ್ರಯೋಜನಕಾರಿ. ಜೊತೆಗೆ ತೂಕ ಇಳಿಕೆಗೆ ಇದು ವರದಾನ. ಇದರಲ್ಲಿ ಕರಗುವ ಫೈಬರ್’ಗಳು ಅಧಿಕವಾಗಿರುತ್ತವೆ
ಪೇರಳೆ ಹೆಚ್ಚಿನ ಫೈಬರ್ ಹೊಂದಿರುವ ಹಣ್ಣು. ಮಧುಮೇಹವನ್ನು ನಿರ್ವಹಿಸುವ ಮತ್ತು ತೂಕವನ್ನು ಕಳೆದುಕೊಳ್ಳುವ ನಿಮ್ಮ ಯೋಜನೆಗಳಿಗೆ ಪೇರಳೆಯು ಅದ್ಭುತವಾದ ಸೇರ್ಪಡೆಯಾಗಿದೆ.
ಪೀಚ್ ಹಣ್ಣು ಮಾನ್ಸೂನ್ ಸಮಯದಲ್ಲಿ ಹೇರಳವಾಗಿ ಸಿಗುವ ಆರೋಗ್ಯ ಸ್ನೇಹಿ ಹಣ್ಣಾಗಿದೆ. ಈ ಪೋಷಕಾಂಶಯುಕ್ತ ಹಣ್ಣುಗಳು ಮಧ್ಯಮ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ ಮತ್ತು ಕಬ್ಬಿಣ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ.
ನೇರಳೆ ಹಣ್ಣು ಭಾರತದಲ್ಲಿ, ಬೇಸಿಗೆ ಮತ್ತು ಮಾನ್ಸೂನ್ ಕಾಲದಲ್ಲಿ ಸಿಗುತ್ತವೆ. ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದಿಂದಾಗಿ ಈ ಹಣ್ಣು ಮಧುಮೇಹ ಇರುವವರಿಗೆ ಸುರಕ್ಷಿತ ಮತ್ತು ಆರೋಗ್ಯಕರವಾಗಿದೆ.
ತಾಜಾ ಚೆರ್ರಿಗಳು ಮಧುಮೇಹಿಗಳಿಗೆ ಆರೋಗ್ಯಕರ. ಏಕೆಂದರೆ ಅವುಗಳು ಹೆಚ್ಚಿನ ಫೈಬರ್ ಅನ್ನು ಹೊಂದಿದ್ದು, ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತವೆ.
ಫೈಬರ್ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವಾಗಿರುವ ಮೊಸಂಬಿ ಮಧುಮೇಹಿಗಳಿಗೆ ಬಹಳಷ್ಟು ಒಳ್ಳೆಯದು.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.