ಬೇಸಿಗೆಯಲ್ಲಿ ಅತಿಯಾದ ಶಾಖದ ಕಾರಣದಿಂದ ಡಿ ಹೈಡ್ರೇಶೇನ್ ಸಮಸ್ಯೆ ಉಂಟಾಗುತ್ತದೆ.ಈ ಕಾರಣದಿಂದ ಬೇಸಿಗೆಯಲ್ಲಿ ಸಿಗುವ ಈ ಹಣ್ಣುಗಳನ್ನು ಸೇವಿಸಬೇಕು.
ಕಲ್ಲಂಗಡಿ ಬೇಸಿಗೆಯಲ್ಲಿ ಸಿಗುವ ಬೆಸ್ಟ್ ಹಣ್ಣು, ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ.
ಖರ್ಬೂಜ ಹಣ್ಣಿನಲ್ಲಿ ಕೂಡಾ ಅತಿ ಹೆಚ್ಚು ನೀರಿನ ಅಂಶ ಇರುತ್ತದೆ. ಇದು ಕೂಡಾ ಡಿ ಹೈಡ್ರೇಶೇನ್ ಆಗದಂತೆ ತಡೆಯುತ್ತದೆ.
ಬೇಸಿಗೆಯಲ್ಲಿ ಕಿತ್ತಳೆ ಹಣ್ಣನ್ನು ತಿನ್ನಲೇಬೇಕು. ಇದರಲ್ಲಿ ವಿಟಮಿನ್ ಸಿ ಜೊತೆಗೆ ನೀರಿನ ಪ್ರಮಾಣ ಕೂಡಾ ಹೆಚ್ಚಾಗಿರುತ್ತದೆ.
ವಿಟಮಿನ್ ಸಿ, ಮಿನರಲ್, ಮುಂತಾದವುಗಳಿಂದ ತುಂಬಿರುವ ಅನಾನಾಸ್ ಹಣ್ಣು ಕೂಡಾ ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣು.
ಇದಲ್ಲದೆ ಬ್ಲೂ ಬೆರಿ ರಸ್ಬೇರಿ ಮುಂತಾದ ಬೆರಿ ಹಣ್ಣುಗಳನ್ನು ಕೂಡಾ ತಿನ್ನಬಹುದು.
ಬೇಸಿಗೆಯಲ್ಲಿ ಎಳನೀರು ಬೆಸ್ಟ್ ಪಾನೀಯ. ಇದರಲ್ಲಿರುವ ಪೋಷಕ ತತ್ವ ಬೇಸಿಗೆಯಲ್ಲಿ ನಮ್ಮ ಎನರ್ಜಿ ಮಟ್ಟವನ್ನು ಕಾಪಾಡುತ್ತದೆ.
ಇದಲ್ಲದೆ, ಸೌತೆಕಾಯಿಯನ್ನು ಕೂಡಾ ಆಹಾರದಲ್ಲಿ ಸೇವಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ