ಗ್ಯಾಸ್ಟ್ರಿಕ್ ಕ್ಯಾನ್ಸರ್ ವಿಶ್ವದ 4ನೇ ಪ್ರಮುಖ ಕ್ಯಾನ್ಸರ್ ಮತ್ತು ಮರಣದ 2ನೇ ಸಾಮಾನ್ಯ ಕಾರಣವಾಗಿದೆ.
ICMR ಪ್ರಕಾರ ಪ್ರತಿವರ್ಷ 1 ಮಿಲಿಯನ್ ಗ್ಯಾಸ್ಟ್ರಿಕ್ ಕ್ಯಾನ್ಸರ್ ಪ್ರಕರಣ ಮತ್ತು 0.7 ಮಿಲಿಯನ್ ಗ್ಯಾಸ್ಟ್ರಿಕ್ ಕ್ಯಾನ್ಸರ್ ಸಾವುಗಳು ವರದಿಯಾಗುತ್ತಿವೆ.
ಆಹಾರ ಸೇವಿಸಿದ ಬಳಿಕ ನಿರಂತರ ಅಜೀರ್ಣ ಅಥವಾ ಎದೆಯುರಿ ಕಾಣಿಸಿಕೊಂಡರೆ ಅದು ಗ್ಯಾಸ್ಟ್ರಿಕ್ ಕ್ಯಾನ್ಸರ್ ಲಕ್ಷಣವಾಗಿರುತ್ತದೆ.
ಆಗಾಗ ವಾಕರಿಕೆ ಅಥವಾ ವಾಂತಿ ಮತ್ತು ಕೆಲವೊಮ್ಮೆ ರಕ್ತವನ್ನು ಹೊಂದಿರುತ್ತದೆ.
ವಿವರಿಸಲಾಗದ ತೂಕ ನಷ್ಟ ಮತ್ತು ಹೆಚ್ಚು ಹೊತ್ತು ಹಸಿವು ಆಗದೆ ಇರುವುದು.
ಸೇವಿಸುವಾಗ ಆಹಾರ ವಿಶೇಷವಾಗಿ ಘನ ಆಹಾರವು ಗಂಟಲಿನಲ್ಲಿ ಸಿಲುಕಿಕೊಂಡಂತೆ ಆಗುವುದು.
ರಕ್ತಸಿಕ್ತ ಮಲ ಅಥವಾ ಕಪ್ಪು ಮಲವು ಜೀರ್ಣಾಂಗದಲ್ಲಿನ ರಕ್ತಸ್ರಾವವನ್ನು ಸೂಚಿಸುತ್ತದೆ.
ವಿಶ್ರಾಂತಿ ತೆಗೆದುಕೊಂಡರೂ ನಿರಂತರ ಆಯಾಸ ಅಥವಾ ದೌರ್ಬಲ್ಯವು ಸುಧಾರಿಸದಿರುವುದು.