ತುಪ್ಪ ಕ್ಯಾಲೋರಿ ಭರಿತ ಆಹಾರವಾಗಿದ್ದು, 100 ml ತುಪ್ಪದಲ್ಲಿ ಸುಮಾರು 99.8 ಗ್ರಾಂ ಕೊಬ್ಬು ಇರುತ್ತದೆ.
ತುಪ್ಪದಲ್ಲಿ ಕಾರ್ಬೋಹೈಡ್ರೇಟ್, ಸಕ್ಕರೆ ಅಂಶ ಕಡಿಮೆ ಇರುತ್ತದೆ. ಅದರಲ್ಲೂ ಹಸುವಿನ ತುಪ್ಪ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ.
ಇನ್ನು ತುಪ್ಪದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಕೆ ಕೂಡ ಸಮೃದ್ಧವಾಗಿದೆ.
ತುಪ್ಪದಲ್ಲಿ ಬ್ಯುಟರಿಕ್ ಆಮ್ಲ ಇದ್ದು, ಇದು ತೂಕವನ್ನು ಕಡಿಮೆ ಮಾಡಲು ಮತ್ತು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ತುಪ್ಪವು ಆರೋಗ್ಯಕರ ಕೊಬ್ಬಿನಂಶವನ್ನು ಹೊಂದಿದೆ. ಇದು ದೇಹಕ್ಕೆ ಉತ್ತಮ ಕೊಲೆಸ್ಟ್ರಾಲ್ ನೀಡುವುದಲ್ಲದೆ, ಹೃದಯ ಆರೋಗ್ಯದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲ ಕ್ಯಾನ್ಸರ್ ವಿರೋಧಿ ಅಂಶವಾಗಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಇದನ್ನು ಉರಿಯೂತ ನಿವಾರಕವಾಗಿಸುತ್ತದೆ.
ತುಪ್ಪವನ್ನು ಸೌಂದರ್ಯವರ್ಧಕವಾಗಿ ಬಳಸಬಹುದು, ಇನ್ನು ಸುಟ್ಟಗಾಯಗಳಿಗೆ ಇದು ಸುಲಭವಾಗಿ ಚಿಕಿತ್ಸೆ ನೀಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ)