ಶುಂಠಿಯು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥವಾಗಿದೆ.
ಬೆಳಗ್ಗೆ ಶುಂಠಿ ಟೀ ಕುಡಿಯುವುದರಿಂದ ದಿನವಿಡೀ ಚೈತನ್ಯದಿಂದ ಇರುತ್ತೀರಿ.
ನಿಯಮಿತವಾಗಿ ಶುಂಠಿಯನ್ನು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತೀರಿ.
ಶುಂಠಿಯು ದೇಹದಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಶುಂಠಿಯಲ್ಲಿರುವ ಕೆಲವು ಅಂಶಗಳು ನಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಶುಂಠಿಯು ನಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ ಮೆದುಳಿನ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಶುಂಠಿಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು ಎಂದು ಹೇಳಲಾಗುತ್ತದೆ.
ಮುಟ್ಟಿನ ಸಮಯದಲ್ಲಿ ನೋವು ಕಾಣಿಸಿಕೊಂಡರೆ ಶುಂಠಿಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸೇವಿಸಿ. ನೋವಿನಿಂದ ಪರಿಹಾರ ಸಿಗುತ್ತೆ.
ಶುಂಠಿಯು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ.