ಈರುಳ್ಳಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಗಂಧಕ, ತಾಮ್ರ ಸೇರಿದಂತೆ ಹಲವು ಪೋಷಕಾಂಶಗಳು ಅಡಕವಾಗಿವೆ. ಉತ್ತಮ ಔಷಧೀಯ ಗುಣಗಳಿಂದ ಕೂಡಿರುವ ಈರುಳ್ಳಿಯನ್ನು ಹಸಿಯಾಗಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ.
ಹಸಿ ಈರುಳ್ಳಿ ಬಳಕೆಯಿಂದ ಚರ್ಮದಲ್ಲಿ ಅಕಾಲಿಕ ಸುಕ್ಕುಗಳು ಕಡಿಮೆಯಾಗಿ, ಯೌವನ ಮರುಕಳಿಸುತ್ತದೆ.
ಈರುಳ್ಳಿ ಸೇವನೆಯು ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಡಯಾಬಿಟಿಸ್ ನಿಯಂತ್ರಣದಲ್ಲಿಡಲು ಪರಿಣಾಮಕಾರಿ ಆಗಿದೆ.
ಈರುಳ್ಳಿಯನ್ನು ಜಜ್ಜಿ ಅದರ ರಸ ತೆಗೆದು ಕೂದಲಿಗೆ ಲೇಪಿಸುವುದರಿಂದ ಹೇರ್ ಫಾಲ್ ಕಡಿಮೆಯಾಗಿ, ಕಾಂತಿಯುತ ಕೂದಲನ್ನು ಹೊಂದಲು ಸಹಾಯಕವಾಗಿದೆ.
ಊಟದ ಜೊತೆಗೆ ಹಸಿ ಈರುಳ್ಳಿ ತಿನ್ನುವುದರಿಂದ ದೇಹದಲ್ಲಿ ರಕ್ತದ ಹರಿವು ನಿಯಂತ್ರಣದಲ್ಲಿರುತ್ತದೆ.
ಪ್ರಯಾಣದ ಸಮಯದಲ್ಲಿ ಈರುಳ್ಳಿ ರಸದಲ್ಲಿ ಸ್ವಲ್ಪ ಶುಂಠಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕುಡಿಯುವುದರಿಂದ ವಾಕರಿಕೆ, ವಾಂತಿ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಈರುಳ್ಳಿ ರಸವನ್ನು ಅರಿಶಿನದಲ್ಲಿ ಬೆರೆಸಿ ಹತ್ತಿ ಸಹಾಯದಿಂದ ಮುಖಕ್ಕೆ ಲೇಪಿಸುವುದರಿಂದ ಮುಖದಲ್ಲಿ ಮೂಡಿರುವ ಕಲೆಗಳಿಂದ ಮುಕ್ತಿ ದೊರೆಯುತ್ತದೆ.
ಹಸಿ ಈರುಳ್ಳಿ ಸೇವನೆಯು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಬಾಧಿಸುವ ಸೆಳೆತ ಸೇರಿದಂತೆ ಕಾಡುವ ಇತರ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.