ಹಿಂದೂ ಧರ್ಮದಲ್ಲಿ, ತುಳಸಿಯನ್ನು ಲಕ್ಷ್ಮಿ ದೇವಿಯ ಒಂದು ರೂಪವೆಂದು ಪೂಜಿಸಲಾಗುತ್ತದೆ. ತುಳಸಿಯನ್ನು ಪೂಜಿಸುವ ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ ಮತ್ತು ಲಕ್ಷ್ಮಿ ಯಾವಾಗಲೂ ಆಶೀರ್ವದಿಸುತ್ತಾಳೆ ಎಂಬ ಧಾರ್ಮಿಕ ನಂಬಿಕೆ ಇದೆ. ತುಳಸಿ ಗಿಡ ಹಸಿರಾಗಿದ್ದರೆ, ಮನೆಯಲ್ಲಿ ಸಮೃದ್ಧಿ ಇರುತ್ತದೆ, ಒಣಗಿ ಹೋದರೆ ಸ್ವಲ್ಪ ತೊಂದರೆ ಬರಲಿದೆ ಎಂದು ಅರ್ಥ.
ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲರೂ ತಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುತ್ತಾರೆ. ಯಾವುದೇ ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಇದು ಅಗತ್ಯವಾಗಿರುತ್ತದೆ. ಆದರೆ ನೀವು ಇದ್ದಕ್ಕಿದ್ದಂತೆ ಮನೆಯಲ್ಲಿ ತುಳಸಿ ಗಿಡದಲ್ಲಿ ಕೆಲವು ಬದಲಾವಣೆಗಳನ್ನು ನೋಡಲು ಪ್ರಾರಂಭಿಸಿದರೆ, ನೀವು ಶ್ರೀಮಂತರಾಗುವ ಸೂಚನೆಯನ್ನು ಪಡೆಯುತ್ತಿದ್ದೀರಿ ಎಂದು ಅರ್ಥ
ವಾಸ್ತು ಶಾಸ್ತ್ರದ ಪ್ರಕಾರ, ಶ್ರೀಮಂತರಾಗುವ ಮೊದಲು, ಮನೆಯಲ್ಲಿ ನೆಟ್ಟ ತುಳಸಿ ಗಿಡವು ಕೆಲವು ಶುಭ ಸೂಚನೆಗಳನ್ನು ನೀಡುತ್ತದೆ. ತುಳಸಿ ಗಿಡ ಇದ್ದಕ್ಕಿದ್ದಂತೆ ಹಸಿರಾಗಲು ಪ್ರಾರಂಭಿಸಿದರೆ, ತುಳಸಿಯಲ್ಲಿ ಹೂವುಗಳು ಬೆಳೆಯಲು ಪ್ರಾರಂಭಿಸಿದರೆ ಅಥವಾ ತುಳಸಿಯ ಮೇಲೆ ಮೊಗ್ಗುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ಶೀಘ್ರದಲ್ಲೇ ನಿಮ್ಮ ವ್ಯವಹಾರದ ಆದಾಯ ಹೆಚ್ಚಾಗಲಿದೆ. ನಿಮಗೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಸಿಗಲಿದೆ ಮತ್ತು ಸಾಲದಿಂದ ಮುಕ್ತಿಯೂ ಸಿಗಲಿದೆ ಎಂದರ್ಥ.
ಮನೆಯಲ್ಲಿರುವ ತುಳಸಿ ಗಿಡದ ಬಳಿ ಅಥವಾ ತುಳಸಿ ಪಾತ್ರೆಯಲ್ಲಿ ದೂರ್ವಾ ಹುಲ್ಲು ಬೆಳೆಯಲು ಪ್ರಾರಂಭಿಸಿದರೆ, ಅದನ್ನು ಶ್ರೀಮಂತರಾಗುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೂರ್ವಾ ಎಂದರೆ ಗರಿಕೆ. ಅದು ಗಣೇಶನಿಗೆ ತುಂಬಾ ಪ್ರಿಯ ಮತ್ತು ತುಳಸಿ ಲಕ್ಷ್ಮಿಗೆ ಪ್ರಿಯ. ದೀಪಾವಳಿಯಂದು ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸುವ ಆಚರಣೆ ಇದೆ.
ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ