ಹಸಿರು ಬಟಾಣಿ ಒಂದು ಅದ್ಭುತವಾದ ಸೂಪರ್ ಫುಡ್ ಎಂದು ಹೇಳಬಹುದು.
ಚಳಿಗಾಲದಲ್ಲಿ ಯಥೇಚ್ಛವಾಗಿ ಸಿಗುವ ಬಟಾಣಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಹಸಿರು ಬಟಾಣಿಯಲ್ಲಿ ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಸಿ ಮತ್ತು ಫೋಲೇಟ್‌ನಿಂದ ಸಮೃದ್ಧವಾಗಿದೆ.
ಪ್ರತಿದಿನ ಹಸಿರು ಬಟಾಣಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಹಸಿರು ಬಟಾಣಿ ತೂಕವನ್ನು ಕಳೆದುಕೊಳ್ಳಲು ಉಪಯುಕ್ತವಾಗಿದೆ.
ಹಸಿರು ಬಟಾಣಿಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
ಕ್ಯಾನ್ಸರ್ ಅಪಾಯವನ್ನು ಸಹ ತೆಗೆದುಹಾಕಬಹುದು. ಇದರಿಂದ ಹೃದಯವನ್ನು ಆರೋಗ್ಯವಾಗಿಡಬಹುದು.
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಹಸಿರು ಬಟಾಣಿ ಸಹ ಉಪಯುಕ್ತವಾಗಿದೆ.
ಹೃದಯಾಘಾತದ ಅಪಾಯ ಕಡಿಮೆ ಮಾಡಲು ಹಸಿರು ಬಟಾಣಿಯನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳಬೇಕು.