ಗ್ರೀನ್ ಟೀ ಸೇವನೆಯ 8 ಪ್ರಯೋಜನಗಳು

Yashaswini V
Jan 30,2024

ಒತ್ತಡ

ಗ್ರೀನ್ ಟೀ ಸೇವನೆಯು ಮನಸ್ಸನ್ನು ಶಾಂತಗೊಳಿಸುವ ಮೂಲಕ ಆತಂಕ ಮತ್ತು ಒತ್ತಡವನ್ನು ನಿವಾರಿಸುತ್ತದೆ.

ಜೀವಕೋಶದ ಹಾನಿ

ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಜೀವಕೋಶದ ಹಾನಿಯಿಂದ ರಕ್ಷಿಸುತ್ತದೆ.

ಆರೋಗ್ಯಕರ ಮೂಳೆ

ಗ್ರೀನ್ ಟೀ ಮೂಳೆಗಳಿಗೆ ಸಂಬಂಧಿಸಿದ ಆಸ್ಟಿಯೊಪೊರೋಸಿಸ್ ಎಂಬ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ

ದೀರ್ಘಾವಧಿಯ ಜೀವನ

ಗ್ರೀನ್ ಟೀಯಲ್ಲಿಉತ್ಕರ್ಷಣ ನಿರೋಧಕಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ನಿವಾರಿಸಬಲ್ಲ ಶಕ್ತಿಯನು ಹೊಂದಿದ್ದು ದೀರ್ಘಾವಧಿಯ ಜೀವನವನ್ನು ಬೆಂಬಲಿಸುತ್ತದೆ.

ನೆನಪಿನಶಕ್ತಿ

ಗ್ರೀನ್ ಟೀಯಲ್ಲಿರುವ ಎಲ್-ಥೈನೈನ್ ಎಂಬ ಅಂಶವು ನಮ್ಮ ಜ್ಞಾಪಕಶಕ್ತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಡಯಾಬಿಟಿಸ್

ಗ್ರೀನ್ ಟೀಯಲ್ಲಿರುವ ಉತ್ಕರ್ಷಣ ನಿರೋಧಕಗಳು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಇದನ್ನು ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಪಾರ್ಶ್ವವಾಯು ಅಪಾಯ

ನಿತ್ಯ ಗ್ರೀನ್ ಟೀ ಕುಡಿಯುವುದರಿಂದ ಪಾರ್ಶ್ವವಾಯು ಅಪಾಯ ಸರಿಸುಮಾರು 21%ರಷ್ಟು ಕಡಿಮೆ ಆಗಲಿದೆ ಎಂಬ ಅಂಶ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ತೂಕ ನಷ್ಟ

ತೂಕ ನಷ್ಟಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಗ್ರೀನ್ ಟೀ ವರದಾನವಿದ್ದಂತೆ. ನಿತ್ಯ ಯೋಗ, ವ್ಯಾಯಾಮ ಮಾಡುವುದರ ಜೊತೆಗೆ ಗ್ರೀನ್ ಟೀ ಕುಡಿಯುವುದರಿಂದ ಇದು ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story