ಜಿಮ್‌ಗೆ ಹೋಗೋದೇ ಬೇಡ...! ಈ ಕೆಲಸಗಳನ್ನು ಮಾಡಿ ತ್ವರಿತವಾಗಿ ತೂಕ ಇಳಿಸಿ

Yashaswini V
Jun 02,2025

ತೂಕ ಇಳಿಕೆಗೆ ಜಿಮ್‌

ತ್ವರಿತವಾಗಿ ತೂಕ ಇಳಿಕೆಗೆ ಬಹುತೇಕ ಜನರು ಜಿಮ್ ಮೊರೆ ಹೋಗುತ್ತಾರೆ. ಆದರೆ, ಜಿಮ್‌ಗೆ ಹೋಗದೆಯೂ ಕೂಡ ವೇಗವಾಗಿ ತೂಕ ಇಳಿಸಿಕೊಳ್ಳಬಹುದು.

ತೂಕ ಇಳಿಕೆಗೆ ಮನೆಕೆಲಸ

ನಿಮಗೆ ಜಿಮ್‌ಗೆ ಹೋಗಲು ಇಷ್ಟವಿಲ್ಲದಿದ್ದರೆ/ ಸಮಯವಿಲ್ಲದಿದ್ದರೆ ಮನೆಯಲ್ಲಿಯೇ ಇದ್ದು ಕೆಲವು ಮನೆಗೆಲಸಗಳನ್ನು ಮಾಡುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

ಶುಚಿಗೊಳಿಸುವಿಕೆ

ನಿತ್ಯ 15-20 ನಿಮಿಷಗಳ ಕಾಲ ಮನೆ ಕಸ ಗುಡಿಸುವುದು, ಮನೆ ಒರೆಸುವ ಹವ್ಯಾಸವನ್ನು ರೂಢಿಸಿಕೊಂಡರೆ ಇದು ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಮಾತ್ರವಲ್ಲ, ನಿತ್ಯ 150ರಿಂದ 200 ಗ್ರಾಂ ನಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡುವಲ್ಲಿಯೂ ಪರಿಣಾಮಕಾರಿ ಆಗಿದೆ.

ತೋಟಗಾರಿಕೆ

ತೋಟಗಾರಿಕೆಯಲ್ಲಿ ಗಿಡಗಳಿಗೆ ನೀರುಣಿಸುವುದು, ಕಲೆ ಕೀಳುವುದು, ಮಣ್ಣು ಅಗೆಯುವಂತಹ ಚಟುವಟಿಕೆಗಳು ದೇಹಕ್ಕೆ ವ್ಯಾಯಾಮವಾದಂತಾಗುತ್ತದೆ. ಇದೂ ಸಹ ಸುಮಾರು 100-150ಗ್ರಾಂ ನಷ್ಟು ಕ್ಯಾಲೋರಿಗಳನ್ನು ಸುಡುವಲ್ಲಿ ಪರಿಣಾಮಕಾರಿ ಆಗಿದೆ.

ಅಡುಗೆ ಮಾಡುವುದು

ಅಡುಗೆ ಮಾಡುವಾಗ ಯಂತ್ರಗಳ ಬದಲಿಗೆ ತರಕಾರಿ ಕತ್ತರಿಸುವುದು, ಕಾಯಿ ತುರಿಯುವುದು, ಹಿಟ್ಟು ನಾದುವುದನ್ನು ನೀವೇ ಮಾಡಿ. ಚಟುವಟಿಕೆಯಿಂದ ಅಡುಗೆ ಮಾಡುವುದರಿಂದ ದಿನದಲ್ಲಿ 80-120 ಗ್ರಾಂ ಕ್ಯಾಲೋರಿ ಬರ್ನ್ ಮಾಡಬಹುದು.

ಮಕ್ಕಳೊಂದಿಗೆ ಆಟ

ಮಕ್ಕಳಿಗೆ ವಿಡಿಯೋ ಗೇಮ್, ಯೂಟ್ಯೂಬ್ ತೋರಿಸುವ ಬದಲಿಗೆ ಅವರಿಗೂ ದೈಹಿಕವಾಗಿ ಶ್ರಮವಾಗುವಂತಹ ಆಟಗಳನ್ನು ಆಡಲು ಬಿಡಿ, ನೀವೂ ಅವರೊಂದಿಗೆ ಆಟವಾಡುವುದರಿಂದ ದಿನಕ್ಕೆ ಸುಮರೋ 250ಗ್ರಾಂ ನಷ್ಟು ಕ್ಯಾಲೋರಿ ಬರ್ನ್ ಮಾಡಬಹುದು.

ಮೆಟ್ಟಿಲುಗಳ ಬಳಕೆ

ಬಳಸುವುದರಿಂದ ತೊಡೆಗಳು, ಕಾಲುಗಳು ಮತ್ತು ಸೊಂಟವನ್ನು ಬಳಪಡಿಸುತ್ತದೆ. ತೂಕವೂ ತ್ವರಿತವಾಗಿ ಕಡಿಮೆಯಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story