ಆಹಾರವು ನಿಮ್ಮ ಮಾನಸಿಕ ಆರೋಗ್ಯವನ್ನು ಮತ್ತು ನಿಮ್ಮ ದೈಹಿಕ ಸಾಮರ್ಥ್ಯವನ್ನು ಕಾಪಾಡುತ್ತದೆ.
ಹೆಚ್ಚಿನ ಕಬ್ಬಿಣದ ಅಂಶವನ್ನು ಹೊಂದಿರುವ ಲೆಟಿಸ್ ಸಂತೋಷದ ಹಾರ್ಮೋನುಗಳನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ.
ಅಣಬೆಗಳು ಖಿನ್ನತೆ ನಿವಾರಕ ಗುಣಗಳಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ.
ಆವಕಾಡೊವು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಮತ್ತು ದಿನವಿಡೀ ನಿಮ್ಮನ್ನು ಸಂತೋಷವಾಗಿರಿಸಲು ಸಲಾಡ್, ಸ್ಯಾಂಡ್‌ವಿಚ್ ಅಥವಾ ಉಪಹಾರಕ್ಕೆ ಆವಕಾಡೊ ಸೇರಿಸಿ.
ಪ್ರತಿದಿನ ಕೆಲವು ಬಾದಾಮಿ ಅಥವಾ ವಾಲ್‌ನಟ್‌ಗಳನ್ನು ತಿನ್ನುವುದರಿಂದ ಕಡುಬಯಕೆಗಳನ್ನು ಕಡಿಮೆ ಮಾಡಬಹುದು.
ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ದೇಹದಲ್ಲಿ ಸಂತೋಷದ ಹಾರ್ಮೋನ್ ಗಳ ಮಟ್ಟ ಹೆಚ್ಚುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮೂಡ್ ಅನ್ನು ಸುಧಾರಿಸುತ್ತದೆ.