ಪ್ರತಿದಿನ ಗೋಡಂಬಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ.
ಗೋಡಂಬಿ ಸ್ಯಾಚುರೇಟೆಡ್ ಕೊಬ್ಬು ಹೊಂದಿದ್ದು, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
ಗೋಡಂಬಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೆ, ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ.
ನಿಯಮಿತವಾಗಿ ಗೋಡಂಬಿ ಸೇವನೆಯಿಂದ ನೀವು ಸ್ಟ್ರೋಕ್ ಅಪಾಯದಿಂದ ಮುಕ್ತಿ ಪಡೆಯಬಹುದು.
ಗೋಡಂಬಿ ಸೇವನೆಯು ಮಧುಮೇಹ ತಡೆಗಟ್ಟುವಿಕೆ ಅಥವಾ ನಿರ್ವಹಣೆಗೆ ಸಹಕಾರಿಯಾಗಿದೆ.
ಗೋಡಂಬಿ ಮೆಗ್ನಿಶಿಯಂ, ಫಾಸ್ಫರಸ್, ಸತು, ಕಬ್ಬಿಣಾಂಶ ಹೇರಳವಾಗಿದ್ದು ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಗೋಡಂಬಿಯು ನರಗಳ ಕಾರ್ಯ ಸುಧಾರಣೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
ಗೋಡಂಬಿಯಲ್ಲಿ ವಿಟಮಿನ್ ʼಇʼ ಯಂತಹ ಆಂಟಿ ಆಕ್ಸಿಡೆಂಟ್ ಅಂಶವಿದ್ದು, ಇದು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡುತ್ತದೆ.