ಕೊತ್ತಂಬರಿ ಜ್ಯೂಸ್

ಪ್ರತಿದಿನ ಕೊತ್ತಂಬರಿ ಜ್ಯೂಸ್ ಸೇವನೆಯಿಂದ‌ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು.

Puttaraj K Alur
Mar 03,2025

ಔಷಧೀಯ ಗುಣ

ಕೊತ್ತಂಬರಿಯ ಎಲೆ, ಕಾಂಡ ಮತ್ತು ಬೇರು ಎಲ್ಲವೂ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.

ಗ್ಯಾಸ್ ಸಮಸ್ಯೆ

ಕೊತ್ತಂಬರಿ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆ ಸ್ವಚ್ಛವಾಗಿರುವುದರ ಜೊತೆಗೆ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.

ರೋಗನಿರೋಧಕ ಶಕ್ತಿ

ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ʼಸಿʼ ಸಮೃದ್ಧವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನ ಬಲಪಡಿಸಲು ಸಹಾಯ ಮಾಡುತ್ತದೆ.

ರಕ್ತದೊತ್ತಡ

ಕೊತ್ತಂಬರಿ ಎಲೆಯ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್

ನಿಯಮಿತವಾಗಿ ಕೊತ್ತಂಬರಿ ಎಲೆಯ ಜ್ಯೂಸ್‌ ಸೇವನೆಯಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ಬರುತ್ತದೆ.

ಕೀಲು ನೋವು

ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಕೊತ್ತಂಬರಿ ಸೊಪ್ಪಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕೀಲು ಊತ ಮತ್ತು ಕೀಲು ನೋವು ನಿವಾರಣೆಯಾಗುತ್ತದೆ.

ಕಿಡ್ನಿ ಸಮಸ್ಯೆ

ನಿಯಮಿತವಾಗಿ ಕೊತ್ತಂಬರಿ ಜ್ಯೂಸ್ ಕುಡಿಯುವುದರಿಂದ ಕಿಡ್ನಿ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ.

VIEW ALL

Read Next Story