ಜೀರಿಗೆ ನೀರು

ಒಂದು ಲೋಟ ಜೀರಿಗೆ ನೀರು ಕುಡಿದರೆ... ಈ ಎಲ್ಲ ಸಮಸ್ಯೆಗಳಿಗೆ ಸಿಗುವುದು ಪರಿಹಾರ!

Chetana Devarmani
Dec 01,2024

ಜೀರಿಗೆ ನೀರು

ಜೀರಿಗೆ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಅನೇಕ ರೋಗಗಳನ್ನು ತಡೆಯುತ್ತದೆ.

ಜೀರಿಗೆ ನೀರು

ಜೀರಿಗೆಯಲ್ಲಿ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ವೇಗಗೊಳಿಸುವ ಸಂಯುಕ್ತಗಳಿವೆ. ಜೀರಿಗೆ ನೀರನ್ನು ಸೇವಿಸುವುದರಿಂದ ಪೋಷಕಾಂಶಗಳನ್ನು ವೇಗವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಜೀರಿಗೆ ನೀರು

ಜೀರಿಗೆ ನೀರು ಕುಡಿಯುವುದರಿಂದ ದೇಹವು ಸಾಕಷ್ಟು ಪೋಷಣೆಯನ್ನು ಪಡೆಯುತ್ತದೆ. ಜೀರಿಗೆಯನ್ನು ನೆನೆಸಿ ತಿಂದರೆ ಹೊಟ್ಟೆ ತಂಪಾಗುತ್ತದೆ.

ಜೀರಿಗೆ ನೀರು

ಕಬ್ಬಿಣ, ತಾಮ್ರ, ಕ್ಯಾಲ್ಸಿಯಂ, ಸತು, ಪೊಟ್ಯಾಸಿಯಮ್ ಮುಂತಾದ ಅನೇಕ ಪೋಷಕಾಂಶಗಳು ಜೀರಿಗೆಯಲ್ಲಿ ಕಂಡುಬರುತ್ತವೆ.

ಜೀರಿಗೆ ನೀರು

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಜೀರಿಗೆ ನೀರನ್ನು ಸೇವಿಸಬಹುದು. ಜೀರಿಗೆ ನೀರನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುವುದು.

ಜೀರಿಗೆ ನೀರು

ಜೀರಿಗೆ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಜೀರಿಗೆ ನೀರು

ಜೀರಿಗೆಯು ಸಾಕಷ್ಟು ಫೈಬರ್ ಅನ್ನು ಹೊಂದಿರುತ್ತದೆ, ಇದು ನೈಸರ್ಗಿಕವಾಗಿ ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ. ತೂಕ ಇಳಿಕೆಗೂ ಸಹಕಾರಿಯಾಗಿದೆ.

ಜೀರಿಗೆ ನೀರು

ಜೀರಿಗೆ ನೀರನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ. ಇದರಿಂದ ಯೂರಿಕ್‌ ಆಸಿಡ್ ಮಟ್ಟ ಸಹ ಕಡಿಮೆಯಾಗುತ್ತದೆ. ಕೀಲು ನೋವು ಗುಣವಾಗುವುದು.

ಜೀರಿಗೆ ನೀರು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story