ನುಗ್ಗೆಕಾಯಿ ಸೇವನೆಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

Ranjitha R K
Mar 08,2024

ಆರೋಗ್ಯ ಸಂಜೀವಿನಿ

ಪೋಷಕ ತತ್ವಗಳಿಂದ ತುಂಬಿರುವ ನುಗ್ಗೆ ಕಾಯಿ, ನುಗ್ಗೆ ಸೊಪ್ಪು, ನುಗ್ಗೆ ಬೀಜ ಎಲ್ಲವೂ ಆರೋಗ್ಯಕ್ಕೆ ಸಂಜೀವಿನಿ.

ತೂಕ ನಿಯಂತ್ರಣ

ನುಗ್ಗೆ ಕಾಯಿ ಬೀಜದಲ್ಲಿ ಆಂಟಿ ಒಬೆಸಿಟಿ ಗುಣಗಳು ಅಡಗಿವೆ. ಹಾಗಾಗಿ ಇದರ ಸೇವನೆ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

ತ್ವಚೆಯ ಆರೋಗ್ಯಕ್ಕೆ

ನುಗ್ಗೆ ಬೀಜದಲ್ಲಿರುವ ಅಂಶಗಳು ತ್ವಚೆಯನ್ನು ಫ್ರೀ ರಾಡಿಕಲ್ಸ್ ನಿಂದ ರಕ್ಷಿಸುತ್ತದೆ.

ಮಧುಮೇಹ ತಡೆಗೆ

ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ

ನುಗ್ಗೆ ಬೀಜ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಹೃದ್ರೋಗದ ಅಪಾಯ ಕೂಡಾ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿ

ನುಗ್ಗೆ ಕಾಯಿ, ನುಗ್ಗೆ ಸೊಪ್ಪು, ನುಗ್ಗೆ ಬೀಜ ಎಲ್ಲವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮೂಳೆಯ ಆರೋಗ್ಯಕ್ಕೆ

ನುಗ್ಗೆಯಲ್ಲಿರುವ ಕ್ಯಾಲ್ಶಿಯಂ, ಮೆಗ್ನಿಶಿಯಂ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ.

ಊತದ ಸಮಸ್ಯೆ ನಿವಾರಣೆ

ದೇಹದಲ್ಲಿ ಕಾಣಿಸಿಕೊಳ್ಳುವ ಊತದ ಸಮಸ್ಯೆಯಿಂದ ನುಗ್ಗೆ ಪರಿಹಾರ ನೀಡುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story