ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಖರ್ಜೂರ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ?

Oct 16,2023

ಜೀವನಶೈಲಿ ಬದಲಾವಣೆ

ಉತ್ತಮ ಆಹಾರ, ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಬೇಗನೆ ಏಳುವುದು ಕೆಲವು ಜೀವನಶೈಲಿಯ ಬದಲಾವಣೆಗಳು ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಒತ್ತಡದಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ.

ಖರ್ಜೂರಗಳ ಆರೋಗ್ಯ ಪ್ರಯೋಜನ

ಇದಲ್ಲದೆ, ನಿಮ್ಮ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವ ಮೂಲಕ ಕೂಡ ಆರೋಗ್ಯವಾಗಿರಬಹುದು. ಅಂತಹ ಒಂದು ಹಣ್ಣು ಖರ್ಜೂರ.

ಪ್ರಯೋಜನಗಳು

ರಾತ್ರಿಯಿಡೀ ನೆನೆಸಿಟ್ಟು ಅಥವಾ ಕಚ್ಚಾ ಖರ್ಜೂರವನ್ನು ಸಹ ಸೇವಿಸಬಹುದು. ಇನ್ನು ನೆನೆಸಿದ ಖರ್ಜೂರವನ್ನು ಪ್ರತಿನಿತ್ಯ ತಿನ್ನುವುದರಿಂದ ಆಗುವ ಪ್ರಯೋಜನಗಳು ಏನೆಂಬುದನ್ನು ನಿಮಗೆ ಹೇಳುತ್ತಿದ್ದೇವೆ.

ಮಲಬದ್ಧತೆ ಸಮಸ್ಯೆ

ನೆನೆಸಿದ 4 ಖರ್ಜೂರಗಳನ್ನು ಮುಂಜಾನೆ ಎದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ, ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ.

ರಕ್ತದೊತ್ತಡ

ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದಲ್ಲದೆ, ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಅಂತೆಯೇ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಲೈಂಗಿಕ ಆರೋಗ್ಯ

ಪುರುಷರು ಮತ್ತು ಮಹಿಳೆಯರ ಲೈಂಗಿಕ ಆರೋಗ್ಯಕ್ಕೆ, ಚರ್ಮ ಮತ್ತು ಕೂದಲಿಗೆ ಪೋಷಣೆ ನೀಡಲು ಹಾಗೂ ತೂಕ ನಷ್ಟಕ್ಕೂ ಇದು ಸಹಾಯಕ.

ಪೋಷಕಾಂಶ

ಖರ್ಜೂರವನ್ನು ನೆನೆಸುವುದರಿಂದ ಅವುಗಳಲ್ಲಿ ಇರುವ ಟ್ಯಾನಿನ್/ಫೈಟಿಕ್ ಆಸಿಡ್ ಅನ್ನು ತೆಗೆದುಹಾಕುತ್ತದೆ. ಅವುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ನಮಗೆ ಸುಲಭವಾಗುತ್ತದೆ.

ಜೀರ್ಣಕ್ರಿಯೆ

ಅಷ್ಟೇ ಅಲ್ಲದೆ, ಖರ್ಜೂರವನ್ನು ನೆನೆಸಿಟ್ಟು ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

VIEW ALL

Read Next Story