ಪನೀರ್ ತಿಂದರೆ ಆರೋಗ್ಯಕ್ಕಿದೆ ಹಲವಾರು ಲಾಭ
ಪನೀರ್ ತುಂಬಾ ರುಚಿಯಾಗಿರುವುದರಿಂದ ಮಕ್ಕಳು ಕೂಡ ಇದನ್ನು ತಿನ್ನಲು ಇಷ್ಟಪಡುತ್ತಾರೆ.
ಪನೀರ್ ಹಾಲಿನ ಉತ್ಪನ್ನವಾಗಿರುವುದರಿಂದ ಇದರಲ್ಲಿ ಪ್ರೊಟೀನ್ ಅಧಿಕವಾಗಿರುತ್ತದೆ.
100 ಗ್ರಾಂ ಪನೀರ್ 18 ಗ್ರಾಂ ಪ್ರೋಟೀನ್ ಅನ್ನು ಹೊಂದಿರುತ್ತದೆ.
ಪನೀರ್‌ನಲ್ಲಿ ಹೇರಳವಾಗಿ ಕಂಡುಬರುವ ಕ್ಯಾಲ್ಸಿಯಂ ನಮ್ಮ ಮೂಳೆಗಳನ್ನು ಬಲವಾಗಿಸುತ್ತದೆ.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಪನೀರ್ ಉತ್ತಮ ಆಹಾರವಾಗಿದೆ.
ಪನೀರ್ ಚಯಾಪಚಯವನ್ನು ಸುಧಾರಿಸುತ್ತದೆ. ಹೊಟ್ಟೆ ಸುತ್ತ ಸಂಗ್ರಹವಾದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಪನೀರ್‌ನಲ್ಲಿರುವ ಹೆಚ್ಚಿನ ಪ್ರಮಾಣದ ಸತುವು ಬಿಳಿ ರಕ್ತ ಕಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಪನೀರ್ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.