ಕುಂಬಳಕಾಯಿ ರಸದಲ್ಲಿ ವಿಟಮಿನ್ ಸಿ

ಕುಂಬಳಕಾಯಿ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಕುಂಬಳಕಾಯಿ ರಸದಲ್ಲಿ ವಿಟಮಿನ್ ಸಿ ಹೆಚ್ಚಾಗಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Channabasava A Kashinakunti
Mar 17,2023

ಕುಂಬಳಕಾಯಿಯಲ್ಲಿ ಆಸ್ಕೋರ್ಬಿಕ್ ಆಮ್ಲ

ಆಸ್ಕೋರ್ಬಿಕ್ ಆಮ್ಲವೆಂದು ಕರೆಯಲ್ಪಡುವ ವಿಟಮಿನ್ ಸಿ, ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಕುಂಬಳಕಾಯಿ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

ಕೆಮ್ಮು, ಶೀತಕ್ಕೆ ಮದ್ದು ಕುಂಬಳಕಾಯಿ

ಕುಂಬಳಕಾಯಿ ಸೇವನೆಯಿಂದ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಕೆಮ್ಮು, ಶೀತ ಮತ್ತು ಹವಾಮಾನದ ಬದಲಾವಣೆಯಿಂದ ಉಂಟಾಗುವ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಅನೇಕ ಅನಾರೋಗ್ಯ ಸಮಸ್ಯೆಗೆ ಕುಂಬಳಕಾಯಿ ರಾಮಬಾಣ.

ಹೇರಳವಾಗಿದೆ ಕಬ್ಬಿಣಾಂಶ

ಕುಂಬಳಕಾಯಿಯಲ್ಲಿ ಕಬ್ಬಿಣಾಂಶವು ಹೇರಳವಾಗಿದ್ದು, ರಕ್ತಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಕುಂಠಿತ ಶಕ್ತಿಯ ಮಟ್ಟ, ತಲೆತಿರುಗುವಿಕೆ, ಹಳದಿ ಚರ್ಮ ಮತ್ತು ಉಗುರುಗಳ ಸಮಸ್ಯೆಗಳನ್ನು ಕುಂಬಳಕಾಯಿ ನಿವಾರಿಸುತ್ತದೆ.

ರೋಗನಿರೋಧಕ ಶಕ್ತಿ

ಕುಂಬಳಕಾಯಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕುಂಬಳಕಾಯಿ ಮತ್ತು ಬೀಜಗಳಲ್ಲಿ ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿವೆ. ಇವು ಅನೇಕ ಸೋಂಕಿನ ಸಮಸ್ಯೆಗಳ ವಿರುದ್ಧ ಹೋರಾಡುವ ಬಿಳಿ ರಕ್ತ ಕಣಗಳ ವೃದ್ಧಿಗೆ ಸಹಕಾರಿ.

ಕುಂಬಳಕಾಯಿಯಲ್ಲಿ ನಾರಿನಂಶ

ಕುಂಬಳಕಾಯಿಯಲ್ಲಿ ನಾರಿನಂಶ ಹೆಚ್ಚಿದೆ. ಇದರಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಕೊಬ್ಬು ಕಂಡು ಬರುವುದಿಲ್ಲ. ಇದರಲ್ಲಿರುವ ಫೈಬರ್ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.

ಕುಂಬಳಕಾಯಿಯಲ್ಲಿ ವಿಟಮಿನ್

ಕುಂಬಳಕಾಯಿಯಲ್ಲಿ ವಿಟಮಿನ್ A, E, C ಮತ್ತು ಐರನ್ ಅಂಶ ಸಮೃದ್ಧವಾಗಿದೆ. ಶೀತ-ಕೆಮ್ಮು, ನೆಗಡಿ ಮತ್ತು ಗಂಟಲು ನೋವು ಸಮಸ್ಯೆಗೆ ಕುಂಬಳಕಾಯಿ ಉತ್ತಮ ಮನೆಮದ್ದು.

VIEW ALL

Read Next Story