ಸ್ಪ್ರಿಂಗ್ ಆನಿಯನ್ ಅಲ್ಲಿರುವ ವಿಟಮಿನ್ ಸಿ ರಕ್ತದೊತ್ತಡ ಮತ್ತು ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತದೆ.
ಸ್ಪ್ರಿಂಗ್ ಆನಿಯನ್ ವಿಟಮಿನ್ ಕೆ ಮತ್ತು ಸಿ ಜೊತೆಗೆ, ವಿಟಮಿನ್ ಎ ಮತ್ತು ಕ್ಯಾರೊಟಿನಾಯ್ಡಗಳಲ್ಲಿ ಸಮೃದ್ಧವಾಗಿದ್ದು, ಈ ಪೋಷಕಾಂಶಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಸ್ಪ್ರಿಂಗ್ ಆನಿಯನ್ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸ್ಪ್ರಿಂಗ್ ಆನಿಯನ್ ಫೈಬರ್‌ಗಳ ಉತ್ತಮ ಮೂಲವಾಗಿದ್ದು ಅದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ಸುಗಮಗೊಳಿಸುತ್ತದೆ.
ಸ್ಪ್ರಿಂಗ್ ಆನಿಯನ್ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದ್ದು ನೆಗಡಿಯಂತಹ ವೈರಲ್ ಸೋಂಕನ್ನು ಎದುರಿಸಲು ಸಹಾಯ ಮಾಡುತ್ತದೆ.
ಸ್ಪ್ರಿಂಗ್ ಆನಿಯನ್‌ನಲ್ಲಿ ಕಂಡುಬರುವ ಸಲ್ಸರ್ ಸಂಯುಕ್ತಗಳು ಇನ್ಸುಲಿನ್ ಉತ್ಪಾದಿಸುವ ಮೂಲಕ ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.