ಪ್ರತಿದಿನ ನೀರಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನೆಗಳೇನು ಗೊತ್ತಾ..?

Deepa A Reddy
Jun 22,2025

ಆಯುರ್ವೇದ

ಆಯುರ್ವೇದದ ಪ್ರಕಾರ ತುಪ್ಪವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಪೋಷಕಾಂಶಗಳ ಗಣಿ

ತುಪ್ಪವು ದೇಹಕ್ಕೆ ಬಹಳ ಅವಶ್ಯಕವಾಗಿದೆ. ಏಕೆಂದರೆ ಇದು ಪೋಷಕಾಂಶಗಳ ಗಣಿಯಾಗಿದೆ, ಇದನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನೆಗಳು ದೊರಕುತ್ತದೆ.

ವಿಟಮಿನ್

ಆರೋಗ್ಯ ತಜ್ಞರು ಹೇಳುವಂತೆ ಇದರಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್‌ ಎ, ವಿಟಮಿನ್‌ ఇ ಮತ್ತು ವಿಟಮಿನ್ ಬಿ ಅಂಶಗಳಿಂದ ಸಮೃದ್ದವಾಗಿದೆ.

ಆರೋಗ್ಯಕ್ಕೆ ಪ್ರಯೋಜನೆ

ತುಪ್ಪದಲ್ಲಿನ ಕೊಬ್ಬಿನಾಂಶ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನೆಗಳನ್ನು ನೀಡುತ್ತದೆ.

ಜೀರ್ಣಕ್ರಿಯೆ

ಪ್ರತಿದಿನ ನಿಮ್ಮ ಆಹಾರದಲ್ಲಿ ತುಪ್ಪವನ್ನು ಸೇರಿಸಿಕೊಳ್ಳುವುದರಿಂದ ಕರುಳನ್ನು ಆರೋಗ್ಯವಾಗಿಡುವುದಲ್ಲದೆ, ಸರಾಗ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಬ್ಯುಟರಿಕ್ ಆಮ್ಲ

ಅದೇ ರೀತಿ, ತುಪ್ಪವು ಬ್ಯುಟರಿಕ್ ಆಮ್ಲದಿಂದ ಸಮೃದ್ದವಾಗಿದೆ. ಆದ್ದರಿಂದ, ಇದನ್ನು ಸೇವಿಸುವುದರಿಂದ ದೇಹದಲ್ಲಿ ರೋಗ-ನಿರೋಧಕ ಟಿ ಕೋಶಗಳನ್ನು ಉತ್ಪಾದಿಸುವಲ್ಲಿ ಇದು ತುಂಬಾ ಸಹಾಯ ಮಾಡುತ್ತದೆ.

ಚರ್ಮದ ಸಮಸ್ಯೆ

ತುಪ್ಪ ಸೇವಿಸುವುದರಿಂದ ಚರ್ಮದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಮತ್ತು ಚರ್ಮವು ತೇವಾಂಶದಿಂದ ಕೂಡಿರುತ್ತದೆ ಮತ್ತು ಆರೋಗ್ಯಕರವಾಗಿರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮೂಳೆಗಳ ಬಲ

ತುಪ್ಪದಲ್ಲಿರುವ ವಿಟಮಿನ್ ಕೆ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮೂಳೆಯ ಬಲಕ್ಕೆ ತುಪ್ಪ ತುಂಬಾ ಒಳ್ಳೆಯದು.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನೂ ಆಧರಿಸಿದೆ, ಇದನ್ನೂ ZEE KANNADA NEWS ಖಚಿತ ಪಡಿಸುವುದಿಲ್ಲ.

VIEW ALL

Read Next Story