ಬೇವಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣವು ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ.
ಬೇವಿನ ಎಲೆಗಳು, ಕೊಂಬೆಗಳು, ತೊಗಟೆ, ಬೀಜಗಳು, ಬೇರು, ಹಣ್ಣುಗಳು ಅಥವಾ ಹೂವುಗಳು ಹೀಗೆ ಪ್ರತಿಯೊಂದು ಭಾಗವು ಉಪಯೋಗಕಾರಿ.
ಇವುಗಳನ್ನ ಉರಿಯೂತ, ಸೋಂಕು ಜ್ವರ, ಚರ್ಮರೋಗ & ಹಲ್ಲಿನ ಕಾಯಿಲೆಗಳಿಂದ ಹಿಡಿದು ಅನೇಕ ಸಮಸ್ಯೆಗಳಿಗೆ ಸಾಂಪ್ರದಾಯಿಕವಾಗಿ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಬೇವು ಬ್ಯಾಕ್ಟೀರಿಯಾ ನಿರೋಧಕ, ಸೂಕ್ಷ್ಮಜೀವಿ ನಿರೋಧಕ, ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್, ನಂಜುನಿರೋಧಕ, ಮಲೇರಿಯಾ ನಿವಾರಕ & ವೈರಸ್ ನಿವಾರಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ.
ಬೇವಿನ ಎಲೆಗಳನ್ನ ಅರೆದು ಲೇಪದ ರೂಪದಲ್ಲಿ ನೇರವಾಗಿ ಅಥವಾ ಕುದಿಸಿ ಚಹಾದ ರೂಪದಲ್ಲಿ ಅಥವಾ ಬೇವಿನ ಕಡ್ಡಿ ಜಗಿಯುವುದರ ಹಲವಾರು ಪ್ರಯೋಜನಗಳಿವೆ.
ರುಚಿಯಲ್ಲಿ ಕಹಿ ಮತ್ತು ಕಟುವಾಗಿರುವ ಬೇವಿನ ಎಲೆಯು ನಮ್ಮ ವಾತ ಅಥವಾ ನರಸ್ನಾಯುಕ ಅಸ್ವಸ್ಥತೆಗಳನ್ನು ಸಮತೋಲನಗೊಳಿಸುವಲ್ಲಿ ವಿಶೇಷವಾದ ಮಹತ್ವ ಪಡೆದಿದೆ.
ಬೇವಿನ ಎಲೆಯು ನಮ್ಮ ರಕ್ತದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ಕ್ಯಾನ್ಸರ್‌ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಚಟುವಟಿಕೆಯನ್ನು ನಿಗ್ರಹಿಸುತ್ತದೆ.