ಪಿಸ್ತಾ ನಾವು ತುಂಬಾ ಇಷ್ಟಪಡುವ ಅತ್ಯಂತ ರುಚಿಕರವಾದ ಡ್ರೈಫ್ರೂಟ್. ಈ ಒಣ ಹಣ್ಣನ್ನು ಅನೇಕ ಪಾಕವಿಧಾನಗಳ ರುಚಿಯನ್ನು ಹೆಚ್ಚಿಸಲು ಮತ್ತು ಅವುಗಳನ್ನು ಅಲಂಕರಿಸಲು ಬಳಸಲಾಗುತ್ತದೆ.
ಇನ್ನು ಪಿಸ್ತಾವನ್ನು ಪ್ರತಿದಿನ ತಿಂದರೆ ಯಾವೆಲ್ಲಾ ವಿಶಿಷ್ಟ ಪ್ರಯೋಜನಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ
ಪ್ರತಿದಿನ ಪಿಸ್ತಾ ಸೇವಿಸಿದರೆ ಅದು ರಕ್ತನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸುಲಭವಾಗುತ್ತದೆ.
ಪಿಸ್ತಾಗಳು ಕ್ಯಾಲೊರಿಗಳನ್ನು ಹೊಂದಿದ್ದರೂ ಸಹ, ಅವು ಉತ್ತಮ ಪ್ರಮಾಣದ ಫೈಬರ್ ಮತ್ತು ಪ್ರೋಟೀನ್ ಅನ್ನು ಒಳಗೊಂಡಿರುತ್ತವೆ. ಇದು ತೂಕ ನಿಯಂತ್ರಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.
ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಮಧುಮೇಹಿಗಳಿಗೆ ಪಿಸ್ತಾ ಅತ್ಯುತ್ತಮ ಆಹಾರವಾಗಿದೆ. ಇದರರ್ಥ ಇದನ್ನು ತಿನ್ನುವುದು ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಪಿಸ್ತಾಗಳು ಫೈಬರ್’ನ ಸಮೃದ್ಧ ಮೂಲವಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸುವ ಮೂಲಕ ಮಲಬದ್ಧತೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ನಿಮ್ಮ ದೇಹವು ದುರ್ಬಲವಾಗಿದ್ದರೆ, ನಿಯಮಿತವಾಗಿ ಪಿಸ್ತಾವನ್ನು ಸೇವಿಸಿ. ಪ್ರಮುಖ ಖನಿಜಗಳಾದ ಫಾಸ್ಫರಸ್ ಮತ್ತು ಮೆಗ್ನೀಸಿಯಮ್ ಇದರಲ್ಲಿ ಕಂಡುಬರುತ್ತದೆ. ಇದು ಮೂಳೆಗಳಿಗೆ ಅದ್ಭುತವಾದ ಶಕ್ತಿಯನ್ನು ನೀಡುತ್ತದೆ.
: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.