ಅರಿಸಿನಕ್ಕೆ ಹಲವಾರು ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ.
ಪ್ರತಿನಿತ್ಯ ಅರಿಸಿನವನ್ನ ಬಳಸುವ ಮೂಲಕ ನಾವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು.
ಅರಿಶಿನವು ಜೀರ್ಣಕ್ರಿಯೆ ಉತ್ತೇಜಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದು, ಪ್ರತಿನಿತ್ಯ ಬಳಕೆಯಿಂದ ಕರುಳಿನ ಆರೋಗ್ಯ ಉತ್ತಮವಾಗುತ್ತದೆ.
ಊಟಕ್ಕೆ ಮೊದಲು ಬೆಚ್ಚಗಿನ ನೀರು ಅಥವಾ ಹರ್ಬಲ್ ಚಹಾಗಳಲ್ಲಿ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿದದರೆ ಜೀರ್ಣಕ್ರಿಯೆಗೆ ಉತ್ತಮ.
ಅರಿಶಿನದಲ್ಲಿನ ಸಕ್ರಿಯ ಸಂಯುಕ್ತ ಕರ್ಕ್ಯುಮಿನ್ ಪ್ರಬಲವಾದ ನೈಸರ್ಗಿಕ ಉರಿಯೂತ ಕಡಿಮೆ ಮಾಡುವ ಅಂಶವಾಗಿದೆ.
ಸಾಮಾನ್ಯವಾಗಿ ಕೀಲು ನೋವು, ಸಂಧಿವಾತ ಮತ್ತು ಸ್ನಾಯು ನೋವು ನಿವಾರಿಸಲು ಅರಿಶಿನವನ್ನು ಆಯುರ್ವೇದ ವೈದ್ಯರು ಶಿಫಾರಸು ಮಾಡುತ್ತಾರೆ.
ಅರಿಸಿನ ಸೇವನೆಯು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.