ಸಾಮಾನ್ಯವಾಗಿ ಅರಿಶಿನದ ಎಲೆಗಳನ್ನು ತಿಂಡಿ ಮಾಡಲು ಬಳಸಲಾಗುತ್ತದೆ. ಆದರೆ ಇದರ ಹೊರತಾಗಿ ಈ ಎಲೆಗಳು ಆರೋಗ್ಯಕರ ಮತ್ತು ಸೌಂದರ್ಯವರ್ಧಕವೂ ಬಳಕೆ ಮಾಡಬಹುದು.
ಅರಿಶಿನ ಎಂಬುದು ಭಾರತದ ಅತ್ಯಂತ ಪುರಾತನ ಮಸಾಲೆ ವಸ್ತು ಜೊತೆಗೆ ಆಯುರ್ವೇದದ ಪ್ರಮುಖ ಅಂಶ. ಸುಮಾರು 4 ಸಾವಿರ ವರ್ಷಗಳಿಂದ ಚಿಕಿತ್ಸೆ ನೀಡಲು ಅರಶಿನವನ್ನು ಬಳಸುತ್ತಾ ಬಂದಿದೆ.
ಅರಿಶಿನದ ಎಲೆಗಳನ್ನು ಚೆನ್ನಾಗಿ ಒಣಗಿಸಿ ಅದರ ಪುಡಿಯನ್ನು, ಅರಶಿನ ಕೊಂಬಿನ ಪುಡಿಯ ಬದಲಿಯಾಗಿ ಬಳಸಬಹುದು.
ಅರಿಶಿನದ ಎಲೆಗಳನ್ನು ಪುಡಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
ಅರಿಶಿನದ ಎಲೆಗಳಲ್ಲಿರುವ ಕುರ್ಕುಮಿನ್ ಅಂಶದಿಂದಾಗಿ ಉರಿಯೂತ ನಿವಾರಣೆಯಾಗುತ್ತದೆ.
ಸಂಧಿವಾತ ಹೊಂದಿರುವ ವ್ಯಕ್ತಿಗಳಿಗೂ ಸಹ ಈ ಎಲೆಗಳು ಅತ್ಯುತ್ತಮ ಔಷಧಿ
ಅರಿಶಿನದ ಎಲೆಯಲ್ಲಿರುವ ಕುರ್ಕುಮಿನ್ ಅಂಶ ಸೌಂದರ್ಯ ಸಂಬಂಧಿ ತೊಂದರೆಗಳಿಗೂ ಚಿಕಿತ್ಸೆ ನೀಡಲು ಸಮರ್ಥವಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)