ನಿಂಬೆಹಣ್ಣಿನಲ್ಲಿ ಪೌಷ್ಟಿಕ ಸತ್ವಗಳು ವಿಪರೀತವಾಗಿವೆ. ಇದು ಹಲವಾರು ರೋಗಗಳಿಗೆ ರಾಮಬಾಣವಾಗಿದೆ.
ನಿಂಬೆ ಹಣ್ಣು ವಿಟಮಿನ್ 'ಸಿ' ಉತ್ತಮ ಮೂಲವಾಗಿದೆ. ನಿಂಬೆಯಲ್ಲಿ ವಿವಿಧ ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.
ನಿಂಬೆಹಣ್ಣಿನ ಸಿಪ್ಪೆಯಲ್ಲಿ ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್, ವಿಟಮಿನ್ C, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಮ್ ಅಂಶಗಳು ಇರುತ್ತವೆ.
ನಿಂಬೆಹಣ್ಣಿನ ವಾಸನೆಗೆ ಕಾರಣವಾಗುವ d-limonene ಇದೆ. ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ನಿಮಗೆ ದೊರೆಯುತ್ತವೆ.
ತ್ವಚೆಯ ಆರೈಕೆ ಮತ್ತು ಮುಖದ ಕಾಂತಿ ಹೆಚ್ಚಿಸಲು ನಿಂಬೆ ಹಣ್ಣಿನ ರಸವನ್ನು ಬಳಕೆ ಮಾಡಲಾಗುತ್ತದೆ.
ನಿಂಬೆ ಹಣ್ಣು ಮತ್ತು ಜೇನು ತುಪ್ಪದ ಮಿಶ್ರಣ ನಮ್ಮ ದೇಹದ ಒಳಗಿನ ರೋಗ ನಿರೋಧಕ ಶಕ್ತಿಯನ್ನು ಅಭಿವೃದ್ಧಿಗೊಳಿಸಿ ಬಲಪಡಿಸುತ್ತದೆ.
ನಿಂಬೆಯಲ್ಲಿ ಆಂಟಿ - ಮೈಕ್ರೋಬಿಯಲ್ ಗುಣ ಲಕ್ಷಣಗಳಿದ್ದು, ಇವುಗಳು ದೇಹಕ್ಕೆ ಎದುರಾಗುವ ಸೋಂಕು ಮತ್ತು ಶೀತ, ಕೆಮ್ಮು, ಜ್ವರದಂತಹ ಸಮಸ್ಯೆ ತಡೆಗಟ್ಟುತ್ತವೆ.