ಬಾದಾಮಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ರಾತ್ರಿ ನೆನೆಸಿಟ್ಟು ಬೆಳಗ್ಗೆ ಬಾದಾಮಿ ಸೇವಿಸುವುದರಿಂದ ನೀವು ಅದ್ಭುತ ಪ್ರಯೋಜನ ಪಡೆಯಬಹುದು.
ಬಾದಾಮಿಯಲ್ಲಿರುವ ವಿಟಮಿನ್ E ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸೊಂಪಾಗಿಸಲು ನೆರವಾಗುತ್ತದೆ.
ಚರ್ಮಕ್ಕೆ ಬಾದಾಮಿ ಎಣ್ಣೆಯನ್ನು ಬಳಸುವುದರಿಂದಲೂ ಹೆಚ್ಚಿನ ಪ್ರಯೋಜನ ಪಡೆಯಬಹುದು.
ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಬಾದಾಮಿ ನೆರವಾಗುತ್ತದೆ.
ಕೂದಲು ಉದುರುವಿಕೆಯ ತೊಂದರೆ ಇರುವ ವ್ಯಕ್ತಿಗಳು ಬಾದಾಮಿ ಎಣ್ಣೆ ಬಳಸಬೇಕು.
ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ.
ಬಾದಾಮಿಯು ಮೆದುಳಿನ ಕ್ಷಮತೆ ಹೆಚ್ಚಿಸುವ ಅತ್ಯುತ್ತಮ ಗುಣವನ್ನು ಹೊಂದಿದೆ.