ಬೆಟ್ಟದ ನೆಲ್ಲಿಕಾಯಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಬೆಟ್ಟದ ನೆಲ್ಲಿಕಾಯಿಯ ರುಚಿ ಹಾಗೂ ಔಷಧೀಯ ಗುಣ ವಿಭಿನ್ನವಾಗಿದೆ.
ನೆಲ್ಲಿಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತಲೂ 20 ಪಟ್ಟು ಹೆಚ್ಚು ವಿಟಮಿನ್ ‘ಸಿ’ ಹೆಚ್ಚಿದೆ.
ಹಸಿ ನೆಲ್ಲಿಕಾಯಿ ಜಜ್ಜಿ ರಸಕ್ಕೆ ಮುಲ್ತಾನಿ ಮಿಟ್ಟಿ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಹೊಳಪು ಹೆಚ್ಚಿ ಕಾಂತಿಯುತಗೊಳ್ಳುತ್ತದೆ.
ಬೆಟ್ಟದ ನೆಲ್ಲಿಕಾಯಿ ರಸಕ್ಕೆ ಜೇನುತುಪ್ಪ ಬೆರೆಸಿ ಸವಿಯುವುದರಿಂದ ಉಸಿರಾಟದ ಸಮಸ್ಯೆಗಳು, ಹೃದಯ ಸಂಬಂಧಿ ರೋಗಗಳು ದೂರವಾಗುತ್ತವೆ.
ನೆಲ್ಲಿಕಾಯಿ ರಸಕ್ಕೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
ಕಫವನ್ನು ನಿವಾರಿಸುವ ಶಕ್ತಿಯೂ ಬೆಟ್ಟದ ನೆಲ್ಲಿಕಾಯಿಗೆ ಇದೆ.
ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ನೆಲ್ಲಿಕಾಯಿ ದೇಹದ ತೂಕ ಇಳಿಸಲೂ ಸಹಕಾರಿ.