ಬಿಲ್ವಪತ್ರೆ

ಆಯುರ್ವೇದದ ಪ್ರಕಾರ ಬಿಲ್ವಪತ್ರೆಯು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.

Puttaraj K Alur
Mar 29,2024

ಔಷಧೀಯ ಗುಣ

ಬಿಲ್ವಪತ್ರೆಯ ಮರದ ಬೇರು, ತೊಗಟೆ, ಪತ್ರೆ ಹಾಗೂ ಕಾಯಿ ಹಣ್ಣು ಎಲ್ಲವೂ ಔಷಧಿ ಗುಣಗಳನ್ನು ಹೊಂದಿವೆ.

ಶಿವನಿಗೆ ಅತ್ಯಂತ ಪ್ರಿಯ

ಭಾರತೀಯ ಸನಾತನ ಸಂಸ್ಕ್ರತಿಯಲ್ಲಿ ಪವಿತ್ರ ಮರವೆಂದು ಕರೆಯುವ ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾಗಿದೆ.

ಮಧುಮೇಹ & ಬೊಜ್ಜು

ಮಧುಮೇಹ, ಬೊಜ್ಜು ಮತ್ತು ಕೂದಲಿನ ಸಮಸ್ಯೆಗೆ ಬಿಲ್ವಪತ್ರೆ ಪರಿಣಾಮಕಾರಿ ಔಷಧಿಯಾಗಿದೆ.

ಮಾನಸಿಕ ಒತ್ತಡ

ಪ್ರತಿದಿನ ಬಿಲ್ವಪತ್ರೆಯ ಕಷಾಯ ಕುಡಿಯುವುದರಿಂದ ಮಾನಸಿಕ ಒತ್ತಡ, ಉದ್ವೇಗ ನಿವಾರಣೆಯಾಗಿ ಮನಸ್ಸಿಗೆ ಶಾಂತಿ ಸಿಗುತ್ತದೆ.

ಬಾಯಿ ಹುಣ್ಣು

ಬಾಯಿಯಲ್ಲಿ ಹುಣ್ಣಾದಾಗ ಬಿಲ್ವಪತ್ರೆಯ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ 2 ಬಾರಿ ಸೇವಿಸುವುದರಿಂದ ಪರಿಹಾರ ದೊರೆಯುತ್ತದೆ.

ವಾಂತಿ & ವಾಕರಿಕೆ

ಬಿಲ್ವಪತ್ರೆಯ ಹಣ್ಣಿನ ತೊಗಟೆಯನ್ನು ಅರೆದು, ಜೇನು ತುಪ್ಪದಲ್ಲಿ ಸೇವಿಸುವುದರಿಂದ ವಾಂತಿ ಮತ್ತು ವಾಕರಿಕೆ ಬರುವುದು ಕಡಿಮೆಯಾಗುತ್ತದೆ.

ಹೃದಯ ಬಡಿತದ ಸಮಸ್ಯೆ

ಹೃದಯ ಬಡಿತದ ಸಮಸ್ಯೆ ಇದ್ದವರು ಬಿಲ್ವಪತ್ರೆಯ ಬೇರಿನ ತೊಗಟೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ನೀರಿನಲ್ಲಿ ಹಾಕಿ ಕುದಿಸಿ ಕಷಾಯದ ರೀತಿಯಲ್ಲಿ ಸೇವಿಸಬೇಕು.

VIEW ALL

Read Next Story