ಏಲಕ್ಕಿ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಏಲಕ್ಕಿಯ ಬೀಜಗಳು ಮತ್ತು ತೈಲ ಔಷಧೀಯ ಗುಣಗಳನ್ನು ಹೊಂದಿವೆ.
ಏಲಕ್ಕಿಯಲ್ಲಿರುವ ಮೂತ್ರ ವರ್ಧಕ ಗುಣವು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಏಲಕ್ಕಿಯಲ್ಲಿರುವ ಕೆಲವು ನಿರ್ದಿಷ್ಟ ಲಕ್ಷಣಗಳು ಕ್ಯಾನ್ಸರ್ ರಕ್ತಕಣಗಳನ್ನು ಹತೋಟಿಯಲ್ಲಿಡುತ್ತವೆ.
ಏಲಕ್ಕಿಯಲ್ಲಿನ ಉತ್ಕರ್ಷಣ ನಿರೋಧಕ ಶಕ್ತಿ ದೇಹದಲ್ಲಿನ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸಲು ಸಹಕಾರಿ.
ನಿಂಬೆಹಣ್ಣಿನ ಪಾನಕಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಕುಡಿದರೆ ವಾಂತಿ ಮತ್ತು ತಲೆ ಸುತ್ತುವಿಕೆ ಕಮ್ಮಿಯಾಗುತ್ತದೆ.
ಚಹಾ ಕಾಯಿಸುವಾಗ ಏಲಕ್ಕಿ ಪುಡಿ ಹಾಕಿ ಕುಡಿಯುವುದರಿಂದ ಆಮಶಂಕೆ ಉರಿಮೂತ್ರ ಗುಣವಾಗುವುದು.
ಏಲಕ್ಕಿಯನ್ನು ಜೀರಿಗೆ ಕಷಾಯದಲ್ಲಿ ಬೆರೆಸುವುದುರಿಂದ ಸಂಕಟ ನಿವಾರಣೆಯಾಗುತ್ತದೆ.