ಕ್ಯಾರೆಟ್ ಅಥವಾ ಗಜ್ಜರಿ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಕ್ಯಾರೆಟ್ನಲ್ಲಿ ಅಧಿಕವಾದ ಪ್ರೋಟಿನ್ ಹಾಗೂ ವಿಟಮಿನ್ಸ್ ಕಂಡು ಬರುತ್ತದೆ.
ಕ್ಯಾರೆಟ್ನಲ್ಲಿ ವಿಟಮಿನ್ A, D, E, K, P, ಕ್ಯಾಲ್ಸಿಯಂ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಅಂಶ ಸಮೃದ್ಧವಾಗಿವೆ.
ಕ್ಯಾರೆಟ್ನಲ್ಲಿ ವಿಟಮಿನ್ A ಅಂಶ ಸಮೃದ್ದವಾಗಿದ್ದು, ಇರುಳುಗುರುಡು ಹೋಗಲಾಡಿಸಲು ಸಹಕಾರಿ.
ಕ್ಯಾರೆಟ್ನಲ್ಲಿನ ಫೈಬರ್ ಅಂಶವು ಉತ್ತಮ ಜೀರ್ಣಕ್ರಿಯೆ ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಕ್ಯಾರೆಟ್ ರಸಕ್ಕೆ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ನೆಗಡಿಯಿಂದ ಮುಕ್ತಿ ಸಿಗುತ್ತದೆ.
ಕ್ಯಾರೆಟ್ನಲ್ಲಿನ ವಿಟಮಿನ್ಸ್ ಮೆದುಳಿನ ಆರೋಗ್ಯಕ್ಕೂ ಕಾಪಾಡಲು ಸಹಕಾರಿಯಾಗಿದೆ.
ಕ್ಯಾರೆಟ್ ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುಂಬಾ ಅನುಕೂಲಕಾರಿ.